Home Bibles ಸಾಮೇತಿಗಳು 8:11 · ಕನ್ನಡ ಬೈಬಲ್
ಸಾಮೇತಿಗಳು 8:11 · ಕನ್ನಡ ಬೈಬಲ್

ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು.

Cross references

ದ್ವಿತೀಯೋಪದೇಶಕಾಂಡ 30:13

ನಾವು ಅದನ್ನು ಮಾಡುವಂತೆ ಯಾರು ನಮಗೋಸ್ಕರ ಸಮುದ್ರವನ್ನು ದಾಟಿ ತಕ್ಕೊಂಡು ತಿಳಿಸುವರು? ಯಾರು ಹೋಗುವರು ಎಂಬುವ ಹಾಗೆ ಅದು ಸಮುದ್ರದ ಆಚೆಯಲ್ಲಿ ಇರುವಂಥದ್ದಲ್ಲ.

ಯೋಬ 28:15

ಅಪರಂಜಿಯನ್ನು ಅದಕ್ಕೆ ಬದಲಾಗಿ ಕೊಡು ವದಿಲ್ಲ; ಅದರ ಕ್ರಯಕ್ಕಾಗಿ ಬೆಳ್ಳಿಯನ್ನು ತೂಗುವ ದಿಲ್ಲ.

ಕೀರ್ತನೆಗಳು 19:10

ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು.

ಕೀರ್ತನೆಗಳು 119:127

ಆದದರಿಂದ ನಿನ್ನ ಆಜ್ಞೆಗಳನ್ನು ಬಂಗಾರ ಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಮಾಡಿದ್ದೇನೆ.

ಸಾಮೇತಿಗಳು 3:14

ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ.

ಸಾಮೇತಿಗಳು 4:5

ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.

ಸಾಮೇತಿಗಳು 16:16

ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.

ಸಾಮೇತಿಗಳು 20:15

ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.

ಮತ್ತಾಯ 16:26

ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?

ಫಿಲಿಪ್ಪಿಯವರಿಗೆ 3:8

ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.

Interlinear

Choose Theme