ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ.ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
Cross references
ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಅನ್ಯ ಜನಾಂಗಗಳ ಸ್ತ್ರೀಯರಾದ--ಮೋವಾಬ್ಯರು ಅಮ್ಮೋನ್ಯರು ಎದೋ ಮ್ಯರು ಚೀದೋನ್ಯರು ಹಿತ್ತಿಯರನ್ನೂ ಮೋಹಿಸಿದನು.
ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ,
ಕರ್ತನೇ, ಸಹಾಯಮಾಡು; ಯಾಕಂದರೆ ಭಕ್ತನು ಮುಗಿದು ಹೋಗುತ್ತಾನೆ; ನಂಬಿಗಸ್ತರು ಮನುಷ್ಯನ ಮಕ್ಕಳೊಳಗಿಂದ ಇಲ್ಲದೆ ಹೋಗುತ್ತಾರೆ.
ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ; ಆಗ--ನಾನು ಜ್ಞಾನಿಯಾಗಿರುವೆನು ಎಂದು ಅಂದು ಕೊಂಡೆನು; ಅದು ನನ್ನಿಂದ ದೂರವಾಯಿತು.
ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.