Home Bibles ಸಾಮೇತಿಗಳು 19:26 · ಕನ್ನಡ ಬೈಬಲ್
ಸಾಮೇತಿಗಳು 19:26 · ಕನ್ನಡ ಬೈಬಲ್

ತಂದೆಯನ್ನು ನಷ್ಟಪಡಿಸಿ ತಾಯಿಯನ್ನು ಓಡಿಸುವವನು ನಾಚಿಕೆಯನ್ನುಂಟು ಮಾಡಿ ನಿಂದೆಯನ್ನು ತರುತ್ತಾನೆ.

Cross references

ದ್ವಿತೀಯೋಪದೇಶಕಾಂಡ 21:18

ಒಬ್ಬ ಮನುಷ್ಯನಿಗೆ ಮೊಂಡನೂ ತಿರುಗಿ ಬೀಳುವ ವನೂ ಆಗಿರುವ ಮಗನಿದ್ದರೆ ಅವನು ತಂದೆಯ ಮಾತನ್ನು ತಾಯಿಯ ಮಾತನ್ನು ಕೇಳದೆಯೂ, ಅವರು ಅವನನ್ನು ಶಿಕ್ಷಿಸಿ ಹೇಳುವ ಮಾತನ್ನೂ ಕೇಳದೆಯೂ ಹೋದರೆ

ಸಾಮೇತಿಗಳು 10:1

ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ.

ಸಾಮೇತಿಗಳು 10:5

ಬೇಸಿಗೆಯಲ್ಲಿ ಕೂಡಿಸುವವನು ಬುದ್ಧಿ ವಂತನಾದ ಮಗನು ಸುಗ್ಗಿಯಲ್ಲಿ ನಿದ್ರೆಮಾಡುವವನು ನಾಚಿಕೆಪಡಿಸುವ ಮಗನು.

ಸಾಮೇತಿಗಳು 17:2

ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.

ಸಾಮೇತಿಗಳು 17:25

ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.

ಸಾಮೇತಿಗಳು 23:22

ನಿನ್ನನ್ನು ಪಡೆದ ತಂದೆಯ ಮಾತಿಗೆ ಕಿವಿಗೊಡು; ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆಮಾಡಬೇಡ.

ಸಾಮೇತಿಗಳು 28:7

ಕಟ್ಟಳೆಯನ್ನು ಕೈಕೊಳ್ಳು ವವನು ಜ್ಞಾನಿಯಾದ ಮಗನು; ದುಂದುಗಾರ ಸಂಗ ಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.

ಸಾಮೇತಿಗಳು 28:14

ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.

ಸಾಮೇತಿಗಳು 28:24

ತನ್ನ ತಂದೆ ತಾಯಿಯನ್ನಾಗಲಿ ದೋಚಿಕೊಂಡು--ಇದು ದೋಷವಲ್ಲ ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.

ಸಾಮೇತಿಗಳು 30:11

ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.

ಸಾಮೇತಿಗಳು 30:17

ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.

ಲೂಕ 15:12

ಅವರಲ್ಲಿ ಕಿರಿಯವನು ತನ್ನ ತಂದೆಗೆ--ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಅಂದನು; ಆಗ ಅವನು ತನ್ನ ಬದುಕನ್ನು ಅವರಿಗೆ ವಿಭಾಗಿಸಿದನು.

ಲೂಕ 15:30

ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.

Interlinear

Choose Theme