Home Bibles ಸಾಮೇತಿಗಳು 30:17 · ಕನ್ನಡ ಬೈಬಲ್
ಸಾಮೇತಿಗಳು 30:17 · ಕನ್ನಡ ಬೈಬಲ್

ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.

Cross references

ಆದಿಕಾಂಡ 9:21

ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.

ಲೇವ್ಯಕಾಂಡ 20:9

ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು.

ದ್ವಿತೀಯೋಪದೇಶಕಾಂಡ 21:18

ಒಬ್ಬ ಮನುಷ್ಯನಿಗೆ ಮೊಂಡನೂ ತಿರುಗಿ ಬೀಳುವ ವನೂ ಆಗಿರುವ ಮಗನಿದ್ದರೆ ಅವನು ತಂದೆಯ ಮಾತನ್ನು ತಾಯಿಯ ಮಾತನ್ನು ಕೇಳದೆಯೂ, ಅವರು ಅವನನ್ನು ಶಿಕ್ಷಿಸಿ ಹೇಳುವ ಮಾತನ್ನೂ ಕೇಳದೆಯೂ ಹೋದರೆ

ದ್ವಿತೀಯೋಪದೇಶಕಾಂಡ 21:21

ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.

ದ್ವಿತೀಯೋಪದೇಶಕಾಂಡ 28:26

ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.

1 ಸಮುವೇಲ 17:44

ದಾವೀದನಿಗೆ--ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು ಅಂದನು.

2 ಸಮುವೇಲ 18:9

ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.

2 ಸಮುವೇಲ 18:14

ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.

2 ಸಮುವೇಲ 21:10

ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತಕ್ಕೊಂಡುಹೋಗಿ ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಸುಗ್ಗಿಯ ದಿವಸ ಮೊದಲುಗೊಂಡು ಆಕಾಶದಿಂದ ಅವರ ಮೇಲೆ ಮಳೆ ಸುರಿಯುವ ವರೆಗೂ ಹಗಲಲ್ಲಿ ಆಕಾಶದ ಪಕ್ಷಿಗಳೂ ರಾತ್ರಿಯಲ್ಲಿ ಅಡವಿಯ ಮೃಗಗಳೂ ಅದರ ಮೇಲೆ ಕೂತುಕೊಳ್ಳದಂತೆ ಕಾಯುತ್ತಿದ್ದಳು.

ಸಾಮೇತಿಗಳು 20:20

ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.

ಸಾಮೇತಿಗಳು 23:22

ನಿನ್ನನ್ನು ಪಡೆದ ತಂದೆಯ ಮಾತಿಗೆ ಕಿವಿಗೊಡು; ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆಮಾಡಬೇಡ.

ಸಾಮೇತಿಗಳು 30:11

ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.

Interlinear

Choose Theme