Home Bibles ಸಾಮೇತಿಗಳು 19:25 · ಕನ್ನಡ ಬೈಬಲ್
ಸಾಮೇತಿಗಳು 19:25 · ಕನ್ನಡ ಬೈಬಲ್

ಪರಿಹಾಸ್ಯಗಾರರನ್ನು ಹೊಡೆದರೆ ಮೂಢರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿ ದರೆ ಅವನು ತಿಳುವಳಿಕೆಯನ್ನು ಗ್ರಹಿಸುವನು.

Cross references

ದ್ವಿತೀಯೋಪದೇಶಕಾಂಡ 13:11

ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ.

ದ್ವಿತೀಯೋಪದೇಶಕಾಂಡ 21:21

ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.

ಸಾಮೇತಿಗಳು 1:5

ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು.

ಸಾಮೇತಿಗಳು 9:8

ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.

ಸಾಮೇತಿಗಳು 15:5

ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;

ಸಾಮೇತಿಗಳು 17:10

ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.

ಸಾಮೇತಿಗಳು 21:11

ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ.

ಪ್ರಕಟನೆ 3:19

ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.

Interlinear

Choose Theme