Home Bibles ಸಾಮೇತಿಗಳು 19:27 · ಕನ್ನಡ ಬೈಬಲ್
ಸಾಮೇತಿಗಳು 19:27 · ಕನ್ನಡ ಬೈಬಲ್

ನನ್ನ ಮಗನೇ, ತಿಳುವಳಿಕೆಯ ಮಾತುಗಳಿಂದ ದಾರಿ ತಪ್ಪಿಸುವ ಬೋಧನೆಯನ್ನು ಕೇಳದಿರು.

Cross references

ದ್ವಿತೀಯೋಪದೇಶಕಾಂಡ 13:1

ಪ್ರವಾದಿಯಾಗಲಿ ಕನಸುಗಳನ್ನು ಕಾಣುವವನಾಗಲಿ ನಿಮ್ಮ ಮಧ್ಯದಲ್ಲಿ ಎದ್ದು ನಿನಗೆ ಸೂಚನೆಯನ್ನಾದರೂ ಅದ್ಭುತವನ್ನಾದರೂ ತೋರಿಸಿ ದರೆ

2 ಸಮುವೇಲ 13:5

ಆಗ ಯೋನಾದಾಬನು ಅವನಿಗೆ--ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ--ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ ನನಗೆ ಆಹಾರ ಕೊಡಲಿ ಎಂದು ಹೇಳು ಅಂದನು.

1 ಅರಸುಗಳು 22:22

ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು.

2 ದಿನವೃತ್ತಾಂತ 10:10

ಆಗ ಅವನ ಕೂಡ ಬೆಳೆದ ಯೌವನಸ್ಥರು ಅವ ನಿಗೆ--ನಿನ್ನ ತಂದೆಯು ನಮ್ಮ ನೊಗವನ್ನು ಭಾರ ಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು

ಸಾಮೇತಿಗಳು 14:7

ನೀನು ಬುದ್ಧಿಹೀನನಲ್ಲಿ ತಿಳುವಳಿಕೆಯ ತುಟಿಗಳನ್ನು ಕಾಣದೆ ಹೋದರೆ ಅವನ ಬಳಿಯಿಂದ ನೀನು ಹೋಗು.

ಮತ್ತಾಯ 7:15

ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.

ಮತ್ತಾಯ 16:6

ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.

ಮತ್ತಾಯ 16:12

ಆಗ ಅವರು ರೊಟ್ಟೀ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಆತನು ಹೇಳಿದನು ಎಂದು ಅವರು ಗ್ರಹಿಸಿಕೊಂಡರು.

ಮಾರ್ಕ 4:24

ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.

ಮಾರ್ಕ 7:6

ಆತನು ಪ್ರತ್ಯುತ್ತರವಾಗಿ ಅವರಿಗೆ --ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸು ತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರ ವಾಗಿದೆ;

ಯೋಹಾನ 10:5

ಅವು ಅನ್ಯನನ್ನು ಹಿಂಬಾಲಿಸದೆ ಅವನ ಬಳಿಯಿಂದ ಓಡಿ ಹೋಗುವವು; ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ.

2 ಕೊರಿಂಥದವರಿಗೆ 11:13

ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ.

ಎಫೆಸದವರಿಗೆ 4:14

ನಾವು ಇನ್ನು ಮೇಲೆ ಹೊಂಚು ಹಾಕುವವರ ವಂಚನೆಗೂ ಮನುಷ್ಯರ ಕಪಟದಿಂದಲೂ ಮೋಸದ ಉಪಾಯ ಮಾಡುವ ತಂತ್ರದಿಂದಲೂ ಬೋಧನೆಯ ಪ್ರತಿಯೊಂದು ಗಾಳಿ ಯಿಂದಲೂ ಬಡಿಯಲ್ಪಟ್ಟು ಅತ್ತಿತ್ತ ನೂಕಾಡಲ್ಪಡುವ ಬಾಲಕರಂತೆ ಇರಬಾರದು.

1 ತಿಮೋಥೆಯ 4:7

ಆದರೆ ಅಜ್ಜೀಕಥೆಗಳಂತಿರುವ ಅಶುದ್ಧವಾದ ಆ ಕಥೆಗಳನ್ನು ನಿರಾಕರಿಸಿ ನೀನು ದೇವ ಭಕ್ತಿಯ ವಿಷಯದಲ್ಲಿಯೇ ಸಾಧನೆ ಮಾಡಿಕೋ.

1 ತಿಮೋಥೆಯ 6:3

ಯಾವನಾದರೂ ಬೇರೆ ವಿಧವಾದ ಉಪದೇಶ ವನ್ನು ಮಾಡಿ ಅಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ

2 ಪೇತ್ರ 2:1

ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು. ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂ ತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ

1 ಯೋಹಾನ 4:1

ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.

2 ಯೋಹಾನ 1:10

ಈ ಬೋಧನೆಯನ್ನು ತಾರದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿ ಕೊಳ್ಳಬೇಡಿರಿ; ಅವನಿಗೆ ವಂದನೆ ಎಂದು ಹೇಳಬೇಡಿರಿ.

ಪ್ರಕಟನೆ 2:2

ನಿನ್ನ ಕ್ರಿಯೆಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು, ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ;

Interlinear

Choose Theme