ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು.
Cross references
ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು.
ನಾನು ನಿಮಗೆ ಹೇಳಿದ್ದನ್ನೆಲ್ಲಾ ಕೈಕೊಳ್ಳಬೇಕು; ಬೇರೆ ದೇವರುಗಳ ಹೆಸರನ್ನು ಎತ್ತಬೇಡ, ಇಲ್ಲವೆ ನಿನ್ನ ಬಾಯಿಂದ ಅದು ಹೊರಡಬಾರದು.
ಮರುದಿವಸದಲ್ಲಿ ಬಾಲಾಕನು ಬಿಳಾಮನನ್ನು ತಕ್ಕೊಂಡು ಬಾಳನ ಎತ್ತರವಾದ ಸ್ಥಳಕ್ಕೆ ಹತ್ತಿಸಿದನು; ಅಲ್ಲಿಂದ ಅವನು ಜನರ ಕಡೇ ಭಾಗವನ್ನು ನೋಡಿದನು.
ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ
ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು ತನ್ನ ಜನರ ಬಳಿಗೆ ಕೂಡಿಸಲ್ಪಟ್ಟ ಹಾಗೆ ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು ನಿನ್ನ ಜನರ ಬಳಿಗೆ ಕೂಡಿಸಲ್ಪಡಬೇಕು.
ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು
ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.
ಬೇಲ್(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.
ಅವರು ಬೀಳುವ ಶಬ್ದದಿಂದ ಭೂಮಿಯು ಕದಲುವದು ಅವರ ಕೂಗಿನ ಶಬ್ದವು ಕೆಂಪು ಸಮುದ್ರ ದಲ್ಲಿ ಕೇಳಬರುವದು.
ದಮಸ್ಕದ ವಿಷಯವಾಗಿ ಹಮಾತೂ ಅರ್ಪಾದೂ ನಾಚಿಕೆಪಡುತ್ತವೆ; ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯ ಪಟ್ಟಿವೆ. ಸಮುದ್ರದಂತೆ ಕಳವಳಪಡುತ್ತದೆ, ಅದು ಸಮ್ಮನಿರಲಾರದು.