Home Bibles ಕೀರ್ತನೆಗಳು 16:4 · ಕನ್ನಡ ಬೈಬಲ್
ಕೀರ್ತನೆಗಳು 16:4 · ಕನ್ನಡ ಬೈಬಲ್

ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.

Cross references

ಆದಿಕಾಂಡ 35:14

ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.

ನಿರ್ಗಮಕಾಂಡ 23:13

ನಾನು ನಿಮಗೆ ಹೇಳಿದ್ದನ್ನೆಲ್ಲಾ ಕೈಕೊಳ್ಳಬೇಕು; ಬೇರೆ ದೇವರುಗಳ ಹೆಸರನ್ನು ಎತ್ತಬೇಡ, ಇಲ್ಲವೆ ನಿನ್ನ ಬಾಯಿಂದ ಅದು ಹೊರಡಬಾರದು.

ಲೇವ್ಯಕಾಂಡ 23:13

ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು.

ಯೆಹೋಶುವ 23:7

ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು

ಕೀರ್ತನೆಗಳು 32:10

ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಕರ್ತನಲ್ಲಿ ಭರವಸವಿಡುವವನನ್ನು ಕರುಣೆಯು ಸುತ್ತಿಕೊಳ್ಳು ವದು.ನೀತಿವಂತರೇ, ಕರ್ತನಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯಉಳ್ಳವರೇ, ಉತ್ಸಾಹ ಧ್ವನಿಮಾಡಿರಿ.

ಕೀರ್ತನೆಗಳು 97:7

ಕೆತ್ತಿದ ವಿಗ್ರಹಗಳನ್ನು ಸೇವಿಸಿ, ವಿಗ್ರಹಗಳಲ್ಲಿ ಹೆಮ್ಮೆಪಡುವ ವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಆತನನ್ನು ಆರಾಧಿಸಿರಿ.

ಕೀರ್ತನೆಗಳು 106:37

ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.

ಯೆಶಾಯ 57:6

ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?

ಯೆಶಾಯ 65:11

ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.

ಯೆಶಾಯ 66:3

ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡು ವವನ ಹಾಗಿದ್ದಾನೆ; ಕುರಿಮರಿಯನ್ನು ಬಲಿಯಾಗಿ ಕೊಡುವವನು ನಾಯಿಯ ಕುತ್ತಿಗೆಯನ್ನು ಕಡಿಯು ವವನ ಹಾಗಿದ್ದಾನೆ; ಕಾಣಿಕೆಯನ್ನು ಅರ್ಪಿಸುವವನು ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಸುಡುವವನು ವಿಗ್ರಹವನ್ನು ಆಶೀರ್ವದಿ ಸುವವನ ಹಾಗಿದ್ದಾನೆ. ಹೌದು, ಅವರು ಸ್ವಂತ ಮಾರ್ಗಗಳನ್ನು ಆದುಕೊಂಡಿದ್ದಾರೆ; ಅವರ ಪ್ರಾಣವು ಅವರ ಅಸಹ್ಯವಾದವುಗಳಲ್ಲಿ ಹರ್ಷಿಸುತ್ತವೆ.

ಯೆರೆಮಿಯ 7:18

ದುಃಖದ ನಿಮಿತ್ತ ನನ್ನನ್ನು ಆದರಿಸಿಕೊಳ್ಳಲು ನಾನು ಮನಸ್ಸು ಮಾಡಿದಾಗ ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. ದೂರ ದೇಶದಿಂದ ನನ್ನ ಜನರ ಮಗಳು ಕೂಗುವ ಶಬ್ದವನ್ನು ನೋಡಿರಿ.

ಹೊಶೇಯ 2:16

ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನೀನು ನನ್ನನ್ನು ಇನ್ನು ಮೇಲೆ ಬಾಳಿ ಎಂದು ಕರೆಯದೆ ಈಶೀ ಎಂದು ಕರೆಯುವಿ.

ಯೋನ 2:8

ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.

ಪ್ರಕಟನೆ 14:9

ತರುವಾಯ ಮೂರನೆಯ ದೂತನು ಅವರನ್ನು ಹಿಂಬಾಲಿಸಿ--ಯಾರಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ತನ್ನ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿ ಕೊಂಡರೆ

ಪ್ರಕಟನೆ 18:4

ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.

Interlinear

Choose Theme