Home Bibles ದ್ವಿತೀಯೋಪದೇಶಕಾಂಡ 32:50 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 32:50 · ಕನ್ನಡ ಬೈಬಲ್

ನಿನ್ನ ಸಹೋದರನಾದ ಆರೋನನು ಹೋರ್‌ ಬೆಟ್ಟದಲ್ಲಿ ಸತ್ತು ತನ್ನ ಜನರ ಬಳಿಗೆ ಕೂಡಿಸಲ್ಪಟ್ಟ ಹಾಗೆ ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು ನಿನ್ನ ಜನರ ಬಳಿಗೆ ಕೂಡಿಸಲ್ಪಡಬೇಕು.

Cross references

ಆದಿಕಾಂಡ 15:15

ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.

ಆದಿಕಾಂಡ 25:8

ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿದ್ದು ಸತ್ತು ತನ್ನ ಜನರೊಂದಿಗೆ ಸೇರಿಸ ಲ್ಪಟ್ಟನು.

ಆದಿಕಾಂಡ 25:17

ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.

ಆದಿಕಾಂಡ 49:33

ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.

ಅಂಕೆಗಳ ಪುಸ್ತಕ 20:24

ಆರೋನನು ತನ್ನ ಜನರ ಸಂಗಡ ಕೂಡಿಸಲ್ಪಡುವನು; ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿ ಬಿದ್ದದರಿಂದ ನಾನು ಇಸ್ರಾಯೇಲ್‌ ಮಕ್ಕಳಿಗೆ ಕೊಟ್ಟ ದೇಶಕ್ಕೆ ಅವನು ಪ್ರವೇಶಿಸುವದಿಲ್ಲ.

ಅಂಕೆಗಳ ಪುಸ್ತಕ 32:38

ನೆಬೋ, ಬಾಳ್ಮೆಯೋನ್‌ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು.

ಅಂಕೆಗಳ ಪುಸ್ತಕ 33:30

ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು.

ಅಂಕೆಗಳ ಪುಸ್ತಕ 33:38

ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್‌ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.

ದ್ವಿತೀಯೋಪದೇಶಕಾಂಡ 31:14

ಇದಲ್ಲದೆ ಕರ್ತನು ಮೋಶೆಗೆ--ಇಗೋ, ನೀನು ಸಾಯುವ ದಿನಗಳು ಸವಿಾಪವಾದವು. ಯೆಹೋಶುವ ನನ್ನು ಕರೆದು ನೀವು ಸಭೆಯ ಗುಡಾರದಲ್ಲಿ ನಿಂತು ಕೊಳ್ಳಿರಿ; ಆಗ ಅವನಿಗೆ ಆಜ್ಞೆ ಕೊಡುವೆನು ಅಂದನು. ಈ ಪ್ರಕಾರ ಮೋಶೆಯೂ ಯೆಹೋಶುವನೂ ಹೋಗಿ ಸಭೆಯ ಗುಡಾರದಲ್ಲಿ ನಿಂತುಕೊಂಡರು.

ದ್ವಿತೀಯೋಪದೇಶಕಾಂಡ 31:16

ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು.

ದಾನಿಯೇಲ 12:13

ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)

Interlinear

Choose Theme