Home Bibles ☰ Books ಯೆಹೋಶುವ 23:7 · ಕನ್ನಡ ಬೈಬಲ್
ಯೆಹೋಶುವ 23:7 · ಕನ್ನಡ ಬೈಬಲ್

ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು

Cross references

ನಿರ್ಗಮಕಾಂಡ 20:5

ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.

ನಿರ್ಗಮಕಾಂಡ 23:13

ನಾನು ನಿಮಗೆ ಹೇಳಿದ್ದನ್ನೆಲ್ಲಾ ಕೈಕೊಳ್ಳಬೇಕು; ಬೇರೆ ದೇವರುಗಳ ಹೆಸರನ್ನು ಎತ್ತಬೇಡ, ಇಲ್ಲವೆ ನಿನ್ನ ಬಾಯಿಂದ ಅದು ಹೊರಡಬಾರದು.

ನಿರ್ಗಮಕಾಂಡ 23:33

ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.

ಅಂಕೆಗಳ ಪುಸ್ತಕ 32:38

ನೆಬೋ, ಬಾಳ್ಮೆಯೋನ್‌ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು.

ಅಂಕೆಗಳ ಪುಸ್ತಕ 33:55

ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.

ದ್ವಿತೀಯೋಪದೇಶಕಾಂಡ 6:13

ನಿನ್ನ ದೇವರಾದ ಕರ್ತನಿಗೆ ನೀನು ಭಯಪಡ ಬೇಕು; ಆತನನ್ನು ಸೇವಿಸಬೇಕು, ಆತನ ಹೆಸರಿನಲ್ಲಿ ಪ್ರಮಾಣ ಮಾಡಬೇಕು.

ದ್ವಿತೀಯೋಪದೇಶಕಾಂಡ 6:14

ನಿಮ್ಮ ಸುತ್ತಲಿರುವ ಜನಗಳ ದೇವರುಗಳಾದ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.

ದ್ವಿತೀಯೋಪದೇಶಕಾಂಡ 7:2

ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.

ಯೆಹೋಶುವ 23:12

ನೀವು ಹಿಂತಿರಿಗಿ ಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗ ಗಳಲ್ಲಿ ಸೇರಿಕೊಂಡು ಅವರಿಗೆ ಮದುವೆಮಾಡಿ ಕೊಟ್ಟರೆ ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ

2 ಅರಸುಗಳು 5:18

ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.

2 ಅರಸುಗಳು 17:12

ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು.

2 ದಿನವೃತ್ತಾಂತ 7:19

ಆದರೆ ನೀವು ಹಿಂದಿರುಗಿ ನಾನು ನಿಮ್ಮ ಮುಂದೆ ಇಟ್ಟ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ತೊರೆದು ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ

ಕೀರ್ತನೆಗಳು 16:4

ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.

ಸಾಮೇತಿಗಳು 4:14

ದುಷ್ಟರ ದಾರಿಯೊಳಗೆ ಪ್ರವೇಶಿಸದಿರು, ಕೆಟ್ಟವರ ಮಾರ್ಗದಲ್ಲಿ ಹೋಗಬೇಡ.

Interlinear

Choose Theme