Home Bibles ಆದಿಕಾಂಡ 46:32 · ಕನ್ನಡ ಬೈಬಲ್
ಆದಿಕಾಂಡ 46:32 · ಕನ್ನಡ ಬೈಬಲ್

ಆದರೆ ಆ ಮನುಷ್ಯರು ಕುರಿಕಾಯುವವರು, ಅವರಿಗೆ ಮಂದೆಗಳು ಇವೆ; ತಮ್ಮ ಕುರಿ ದನಗಳನ್ನೂ ತಮಗಿದ್ದದ್ದೆಲ್ಲವನ್ನೂ ತಕ್ಕೊಂಡು ಬಂದಿದ್ದಾರೆ ಎಂದು ಹೇಳುವೆನು.

Cross references

ಆದಿಕಾಂಡ 4:2

ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾ ದನು, ಕಾಯಿನನು ವ್ಯವಸಾಯಮಾಡುವವನಾದನು.

ಆದಿಕಾಂಡ 9:20

ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.

ಆದಿಕಾಂಡ 31:18

ತನ್ನ ಎಲ್ಲಾ ಪಶುಗಳನ್ನೂ ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ ಪದ್ದನ್‌ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್‌ ದೇಶ ದಲ್ಲಿದ್ದ ತನ್ನ ತಂದೆಯಾದ ಇಸಾಕನ ಬಳಿಗೆ ತಕ್ಕೊಂಡು ಹೋದನು.

ಆದಿಕಾಂಡ 37:2

ಇವು ಯಾಕೋಬನ ವಂಶಾವಳಿಗಳು: ಯೋಸೇಫನು ಹದಿನೇಳು ವರುಷದವನಾಗಿದ್ದಾಗ ತನ್ನ ಸಹೋದರರ ಸಂಗಡ ಮಂದೆಯನ್ನು ಮೇಯಿಸು ತ್ತಿದ್ದನು. ಆ ಹುಡುಗನು ತನ್ನ ತಂದೆಯ ಹೆಂಡತಿ ಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಕುಮಾರರ ಸಂಗಡ ಇದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.

ಆದಿಕಾಂಡ 45:10

ಗೋಷೆನ್‌ ದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ ಮೊಮ್ಮಕ್ಕಳೂ ದನ ಕುರಿಗಳೂ ನಿನಗಿದ್ದದ್ದೆಲ್ಲವೂ ನನ್ನ ಸವಿಾಪ ದಲ್ಲಿರಬೇಕು;

ಆದಿಕಾಂಡ 46:34

ಗೋಷೆನ್‌ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು.

ಆದಿಕಾಂಡ 47:3

ಫರೋಹನು ಯೋಸೇಫನ ಸಹೋದರರಿಗೆ--ನಿಮ್ಮ ಕೆಲಸವೇನು ಎಂದು ಕೇಳಿದಾಗ ಅವರು ಫರೋಹನಿಗೆ--ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಕುರಿಕಾಯುವವರಾಗಿದ್ದೇವೆ ಅಂದರು.

ನಿರ್ಗಮಕಾಂಡ 3:1

ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್‌ ಎಂಬ ದೇವರ ಬೆಟ್ಟಕ್ಕೆ ಬಂದನು.

1 ಸಮುವೇಲ 16:11

ಸಮುವೇಲನು--ನಿನಗಿರುವ ಮಕ್ಕ ಳೆಲ್ಲಾ ಇಷ್ಟೇ ಮಂದಿಯೋ? ಎಂದು ಇಷಯನನ್ನು ಕೇಳಿದನು. ಅದಕ್ಕವನು--ಇವರೆಲ್ಲರಿಗಿಂತಲೂ ಚಿಕ್ಕವ ನೊಬ್ಬನು ಉಳಿದಿದ್ದಾನೆ; ಇಗೋ, ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ ಅಂದನು. ಆಗ ಸಮುವೇಲನು ಇಷಯನಿಗೆ--ಅವನನ್ನು ಕರೆಯ ಕಳುಹಿಸು; ಯಾಕಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕೂತುಕೊಳ್ಳಬಾರದು ಅಂದನು.

1 ಸಮುವೇಲ 17:15

ದಾವೀದನು ಸೌಲನನ್ನು ಬಿಟ್ಟು ಬೇತ್ಲೆಹೇಮಿಗೆ ತನ್ನ ತಂದೆಯ ಕುರಿಗಳನ್ನು ಮೇಯಿಸಲು ಹೋಗಿದ್ದನು.

1 ಅರಸುಗಳು 9:27

ಹೀರಾಮನು ಹಡಗುಗಳಲ್ಲಿ ಸಮುದ್ರದ ಜ್ಞಾನವುಳ್ಳ ನಾವಿಕರಾಗಿರುವ ತನ್ನ ಸೇವಕರನ್ನು ಸೊಲೊಮೋನನ ಸೇವಕರ ಸಂಗಡ ಕಳುಹಿಸಿದನು.ಅವರು ಓಫಿರಿಗೆ ಹೋಗಿ ಅಲ್ಲಿಂದ ನಾನೂರ ಇಪ್ಪತ್ತು ಬಂಗಾರದ ತಲಾಂತು ಗಳನ್ನು ಅರಸನಾದ ಸೊಲೊಮೋನನಿಗೆ ತಕ್ಕೊಂಡು ಬಂದರು.

1 ಅರಸುಗಳು 18:5

ಅಹಾ ಬನು ಓಬದ್ಯನಿಗೆ--ನೀನು ದೇಶದಲ್ಲಿರುವ ಎಲ್ಲಾ ನೀರು ಬುಗ್ಗೆಗಳ ಬಳಿಗೂ ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳಕೊಳ್ಳದ ಹಾಗೆ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ಜೀವ ದಿಂದ ಇರಿಸುವದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು ಅಂದನು.

ಕೀರ್ತನೆಗಳು 78:70

ಇದಲ್ಲದೆ ತನ್ನ ಸೇವಕನಾದ ದಾವೀದನನ್ನು ಆದುಕೊಂಡು, ಕುರಿ ಹಟ್ಟಿಗಳಿಂದ ಅವನನ್ನು ತೆಗೆದು,

ಯೆಶಾಯ 40:11

ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.

ಜೆಕರ್ಯ 13:5

ಆದರೆ ಅವರು--ನಾನು ಪ್ರವಾದಿಯಲ್ಲ, ನಾನು ಭೂಮಿಯಲ್ಲಿ ವ್ಯವಸಾಯಮಾಡುವವನು; ಒಬ್ಬನು ನನ್ನನ್ನು ಚಿಕ್ಕತನದಿಂದ ದನಗಳನ್ನು ಕಾಯುವದಕ್ಕೆ ಕಲಿಸಿದನು ಅನ್ನುವನು.

Interlinear

Choose Theme