ಹೀರಾಮನು ಹಡಗುಗಳಲ್ಲಿ ಸಮುದ್ರದ ಜ್ಞಾನವುಳ್ಳ ನಾವಿಕರಾಗಿರುವ ತನ್ನ ಸೇವಕರನ್ನು ಸೊಲೊಮೋನನ ಸೇವಕರ ಸಂಗಡ ಕಳುಹಿಸಿದನು.ಅವರು ಓಫಿರಿಗೆ ಹೋಗಿ ಅಲ್ಲಿಂದ ನಾನೂರ ಇಪ್ಪತ್ತು ಬಂಗಾರದ ತಲಾಂತು ಗಳನ್ನು ಅರಸನಾದ ಸೊಲೊಮೋನನಿಗೆ ತಕ್ಕೊಂಡು ಬಂದರು.
Cross references
ಆದದರಿಂದ ನೀನು ನನ ಗೋಸ್ಕರ ಲೆಬನೋನಿನಲ್ಲಿ ದೇವದಾರು ಮರಗಳನ್ನು ಕಡಿಯಲು ಆಜ್ಞಾಪಿಸು. ನನ್ನ ಸೇವಕರೂ ನಿನ್ನ ಸೇವಕರೂ ಕೂಡ ಇರಲಿ. ನೀನು ಹೇಳಿದ ಎಲ್ಲಾದರ ಪ್ರಕಾರ ನಿನ್ನ ಸೇವಕರಿಗೋಸ್ಕರ ಕೂಲಿಯನ್ನು ಕೊಡು ತ್ತೇನೆ. ನಮ್ಮಲ್ಲಿ ಚೀದೋನ್ಯರ ಹಾಗೆ ಮರವನ್ನು ಕಡಿಯಲು ತಿಳಿದವರಿಲ್ಲವೆಂದು ನೀನು ಬಲ್ಲೆ ಎಂದು ಹೇಳಿದನು.
ನನ್ನ ಸೇವಕರು ಅವುಗಳನ್ನು ಲೆಬ ನೋನಿನಿಂದ ಸಮುದ್ರಕ್ಕೆ ತಂದ ಮೇಲೆ ನೀನು ನನಗೆ ನೇಮಿಸಿದ ಸ್ಥಳಕ್ಕೆ ತೆಪ್ಪವನ್ನು ಕಟ್ಟಿಸಿ ಸಮುದ್ರದಿಂದ ಕಳುಹಿಸಿ ಅಲ್ಲಿ ಒಪ್ಪಿಸುವ ಹಾಗೆ ಮಾಡುವೆನು. ನೀನು ಅವುಗಳನ್ನು ತಕ್ಕೊಂಡು ನನ್ನ ಮನೆಯವರಿಗೋಸ್ಕರ ಆಹಾರವನ್ನು ಕೊಟ್ಟು ನನ್ನ ಇಚ್ಚೆಯನ್ನು ತೀರಿಸುವಿ ಅಂದನು.
ಇದಲ್ಲದೆ ಹೀರಾಮನ ಹಡಗುಗಳು ಓಫಿರಿನಿಂದ ಬಂಗಾರವನ್ನೂ ಅನೇಕ ಅಲ್ಮುಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ತಂದವು.
ಆಗ ಅಹಾಬನ ಮಗನಾದ ಅಹಜ್ಯನು ಯೆಹೋ ಷಾಫಾಟನಿಗೆ--ನನ್ನ ಸೇವಕರು ನಿನ್ನ ಸೇವಕರ ಸಂಗಡ ಹಡಗುಗಳಲ್ಲಿ ಹೋಗಲಿ ಅಂದನು; ಆದರೆ ಯೆಹೋ ಷಾಫಾಟನು ಸಮ್ಮತಿಸಲಿಲ್ಲ.
ಇದಲ್ಲದೆ ತಾರ್ಷಿ ಷಿಗೆ ಹೋಗುವ ನಿಮಿತ್ತ ಹಡಗುಗಳನ್ನು ಮಾಡಿಸಲು ಅವನ ಸಂಗಡ ಸೇರಿಕೊಂಡನು. ಅವರು ಎಚ್ಯೋನ್ಗೆಬೆ ರಿನಲ್ಲಿ ಹಡಗುಗಳನ್ನು ಮಾಡಿಸಿದನು.ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು.