Home Bibles ಆದಿಕಾಂಡ 9:20 · ಕನ್ನಡ ಬೈಬಲ್
ಆದಿಕಾಂಡ 9:20 · ಕನ್ನಡ ಬೈಬಲ್

ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.

Cross references

ಆದಿಕಾಂಡ 3:18

ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ.

ಆದಿಕಾಂಡ 3:23

ಆದದರಿಂದ ಕರ್ತನಾದ ದೇವರು ಅವನನ್ನು ಯಾವದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯಮಾಡುವದಕ್ಕೆ ಏದೆನ್‌ ತೋಟದಿಂದ ಹೊರಡಿಸಿಬಿಟ್ಟನು.ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು.

ಆದಿಕಾಂಡ 4:2

ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾ ದನು, ಕಾಯಿನನು ವ್ಯವಸಾಯಮಾಡುವವನಾದನು.

ಆದಿಕಾಂಡ 5:29

ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.

ದ್ವಿತೀಯೋಪದೇಶಕಾಂಡ 20:6

ದ್ರಾಕ್ಷೇತೋಟವನ್ನು ನೆಟ್ಟು ಅದರ ಫಲ ವನ್ನು ತಿನ್ನದೆ ಇರುವ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅದರ ಫಲ ತಿನ್ನದಹಾಗೆ ಅವನು ಸಹ ತಿರುಗಿಕೊಂಡು ತನ್ನ ಮನೆಗೆ ಹೋಗಲಿ.

ದ್ವಿತೀಯೋಪದೇಶಕಾಂಡ 28:30

ಹೆಂಡತಿಯನ್ನು ನಿಶ್ಚಯಿಸಿಕೊಂಡರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳುವನು; ಮನೆಯನ್ನು ಕಟ್ಟಿದರೆ ಅದರಲ್ಲಿ ವಾಸಮಾಡುವದಿಲ್ಲ; ದ್ರಾಕ್ಷೇತೋಟವನ್ನು ನೆಟ್ಟರೆ ಅದರ ಫಲವನ್ನು ಕೂಡಿಸುವದಿಲ್ಲ.

ಸಾಮೇತಿಗಳು 10:11

ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ.

ಸಾಮೇತಿಗಳು 12:11

ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.

ಸಾಮೇತಿಗಳು 24:30

ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು;

ಸಭಾಪ್ರಸಂಗಿ 5:9

ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ.

ಪರಮಗೀತ 1:6

ನನ್ನನ್ನು ನೋಡಬೇಡಿರಿ; ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ; ನನ್ನ ತಾಯಿಯ ಮಕ್ಕಳು ನನ್ನ ಮೇಲೆ ಕೋಪಗೊಂಡು ದ್ರಾಕ್ಷೇ ತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ನನ್ನ ಸ್ವಂತ ದ್ರಾಕ್ಷೇ ತೋಟವನ್ನು ನಾನು ಕಾಯಲಿಲ್ಲ.

ಯೆಶಾಯ 28:24

ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣು ಹೆಂಟೆಯನ್ನು ತೆಗೆದು (ದಿನವೆಲ್ಲಾ) ಹೊಡೆ ಯುವನೋ?

1 ಕೊರಿಂಥದವರಿಗೆ 9:7

ಸ್ವಂತ ಖರ್ಚಿನಿಂದ ಯಾರಾದರೂ ಯಾವಾಗಲಾದರೂ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇ ತೋಟವನ್ನು ನೆಟ್ಟ ಯಾರಾದರೂ ಅದರ ಫಲವನ್ನು ತಿನ್ನದಿರುವ ದುಂಟೇ? ಇಲ್ಲವೆ ಮಂದೆಯನ್ನು ಮೇಯಿಸಿದ ಯಾರಾದರೂ ಮಂದೆಯ ಹೈನವನ್ನು ತಿನ್ನದಿರುವ ದುಂಟೇ?

Interlinear

Choose Theme