Home Bibles ಆದಿಕಾಂಡ 37:2 · ಕನ್ನಡ ಬೈಬಲ್
ಆದಿಕಾಂಡ 37:2 · ಕನ್ನಡ ಬೈಬಲ್

ಇವು ಯಾಕೋಬನ ವಂಶಾವಳಿಗಳು: ಯೋಸೇಫನು ಹದಿನೇಳು ವರುಷದವನಾಗಿದ್ದಾಗ ತನ್ನ ಸಹೋದರರ ಸಂಗಡ ಮಂದೆಯನ್ನು ಮೇಯಿಸು ತ್ತಿದ್ದನು. ಆ ಹುಡುಗನು ತನ್ನ ತಂದೆಯ ಹೆಂಡತಿ ಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಕುಮಾರರ ಸಂಗಡ ಇದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.

Cross references

ಆದಿಕಾಂಡ 2:4

ಇದೇ ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ.

ಆದಿಕಾಂಡ 5:1

ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು.

ಆದಿಕಾಂಡ 6:9

ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.

ಆದಿಕಾಂಡ 10:1

ನೋಹನ ಕುಮಾರರಾದ ಶೇಮ್‌ ಹಾಮ್‌ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.

ಆದಿಕಾಂಡ 30:4

ಹೀಗೆ ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳ ಬಳಿಗೆ ಹೋದನು.

ಆದಿಕಾಂಡ 30:9

ಲೇಯಳು ತಾನು ಹೆರುವದು ನಿಂತಿತೆಂದು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ತಕ್ಕೊಂಡು ಯಾಕೋಬ ನಿಗೆ ಹೆಂಡತಿಯಾಗಿ ಕೊಟ್ಟಳು.

ಆದಿಕಾಂಡ 35:22

ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.

ಆದಿಕಾಂಡ 35:25

ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು.

ಆದಿಕಾಂಡ 42:8

ಯೋಸೇಫನು ತನ್ನ ಸಹೋದರರನ್ನು ಗುರುತಿಸಿದಾಗ್ಯೂ ಅವರು ಅವನನ್ನು ಗುರುತಿಸಲಿಲ್ಲ.

1 ಸಮುವೇಲ 2:22

ಆದರೆ ಏಲಿಯು ಬಹಳ ವೃದ್ಧನಾಗಿದ್ದನು. ತನ್ನ ಕುಮಾರರು ಇಸ್ರಾಯೇಲಿಗೆ ಮಾಡುವದೆಲ್ಲವನ್ನೂ ಅವರು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿ ಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬದನ್ನೂ ಕೇಳಿ ಅವರಿಗೆ--

ಯೋಹಾನ 7:7

ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ಅದರ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯ ದಲ್ಲಿ ನಾನು ಸಾಕ್ಷಿ ಹೇಳುವದರಿಂದ ಅದು ನನ್ನನ್ನು ಹಗೆಮಾಡುತ್ತದೆ.

1 ಕೊರಿಂಥದವರಿಗೆ 1:11

ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.

1 ಕೊರಿಂಥದವರಿಗೆ 5:1

ನಿಮ್ಮಲ್ಲಿ ಜಾರತ್ವವಿದೆಯೆಂದು ಸಾಧಾರಣ ವಾಗಿ ಹೇಳಲ್ಪಟ್ಟಿದೆ; ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.

1 ಕೊರಿಂಥದವರಿಗೆ 11:18

ಹೇಗಂದರೆ ಮೊದಲನೆಯದು ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮಲ್ಲಿ ಭೇದಗಳು ಉಂಟಾಗುತ್ತವೆಂದು ಕೇಳುತ್ತೇನೆ; ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.

Interlinear

Choose Theme