Home Bibles ಆದಿಕಾಂಡ 24:29 · ಕನ್ನಡ ಬೈಬಲ್
ಆದಿಕಾಂಡ 24:29 · ಕನ್ನಡ ಬೈಬಲ್

ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿಬಂದನು.

Cross references

ಆದಿಕಾಂಡ 24:55

ಅದಕ್ಕೆ ಆಕೆಯ ಸಹೋ ದರನೂ ತಾಯಿಯೂ--ಹುಡುಗಿಯು ಕೆಲವು ದಿನ, ಅಂದರೆ ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇರಲಿ; ತರುವಾಯ ಹೋಗಲಿ ಅಂದರು.

ಆದಿಕಾಂಡ 24:60

ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.

ಆದಿಕಾಂಡ 27:43

ಆದದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು; ಎದ್ದು ಹಾರಾನಿನಲ್ಲಿರುವ ನನ್ನ ಸಹೋದರನಾದ ಲಾಬಾನನ ಬಳಿಗೆ ಓಡಿಹೋಗು.

ಆದಿಕಾಂಡ 28:2

ಎದ್ದು ನಿನ್ನ ತಾಯಿಯ ತಂದೆಯಾದ ಬೆತೂವೇಲನು ಇರುವ ಪದ್ದನ್‌ ಅರಾಮಿಗೆ ಹೋಗಿ ನಿನ್ನ ತಾಯಿಯ ಸಹೋದರನಾದ ಲಾಬಾನನ ಮಕ್ಕಳಲ್ಲಿ ನಿನಗೆ ಹೆಂಡತಿಯನ್ನು ತಕ್ಕೋ.

ಆದಿಕಾಂಡ 29:5

ಅದಕ್ಕ ವನು ಅವರಿಗೆ--ನಾಹೋರನ ಮಗನಾದ ಲಾಬಾನ ನನ್ನು ನೀವು ಬಲ್ಲಿರೋ ಅಂದಾಗ ಅವರು-- ನಾವು ಅವನನ್ನು ಬಲ್ಲೆವು ಅಂದರು.

ಆದಿಕಾಂಡ 29:13

ಲಾಬಾನನು ತನ್ನ ಸಹೋದರಿಯ ಮಗನಾದ ಯಾಕೋಬನ ಸುದ್ದಿಯನ್ನು ಕೇಳಿದಾಗ ಅವನನ್ನು ಸಂಧಿಸುವದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು.

Interlinear

Choose Theme