Home Bibles ಆದಿಕಾಂಡ 24:28 · ಕನ್ನಡ ಬೈಬಲ್
ಆದಿಕಾಂಡ 24:28 · ಕನ್ನಡ ಬೈಬಲ್

ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿ ತಿಳಿಸಿದಳು.

Cross references

ಆದಿಕಾಂಡ 24:48

ನನ್ನ ತಲೆಯನ್ನು ಬಾಗಿಸಿ ಕರ್ತನನ್ನು ಆರಾಧಿಸಿ ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿ ಯಾಗಿ ತಕ್ಕೊಳ್ಳುವದಕ್ಕೆ ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು.

ಆದಿಕಾಂಡ 24:55

ಅದಕ್ಕೆ ಆಕೆಯ ಸಹೋ ದರನೂ ತಾಯಿಯೂ--ಹುಡುಗಿಯು ಕೆಲವು ದಿನ, ಅಂದರೆ ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇರಲಿ; ತರುವಾಯ ಹೋಗಲಿ ಅಂದರು.

ಆದಿಕಾಂಡ 24:67

ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.

ಆದಿಕಾಂಡ 31:33

ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಅವುಗಳನ್ನು ಕಂಡು ಕೊಳ್ಳಲಿಲ್ಲ; ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.

Interlinear

Choose Theme