Home Bibles ಆದಿಕಾಂಡ 24:30 · ಕನ್ನಡ ಬೈಬಲ್
ಆದಿಕಾಂಡ 24:30 · ಕನ್ನಡ ಬೈಬಲ್

ಅವನು ವಾಲೆಯನ್ನೂ ತನ್ನ ಸಹೋದರಿಯ ಕೈಗಳಲ್ಲಿದ್ದ ಕಡಗಗಳನ್ನೂ ನೋಡಿ ಆ ಮನುಷ್ಯನು ತನ್ನ ಕೂಡ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿಯಾದ ರೆಬೆಕ್ಕಳ ಮಾತುಗಳನ್ನು ಕೇಳಿ ಆ ಮನುಷ್ಯನ ಬಳಿಗೆ ಬಂದನು. ಇಗೋ, ಅವನು ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.

Cross references

ಆದಿಕಾಂಡ 24:22

ಒಂಟೆಗಳು ಕುಡಿದ ಮೇಲೆ ಆ ಮನುಷ್ಯನು ಅರ್ಧ ಶೆಕೆಲ್‌ ತೂಕದ ಚಿನ್ನದ ವಾಲೆಯನ್ನು ಹತ್ತು ಶೆಕೆಲ್‌ ತೂಕದ ಎರಡು ಕಡಗಗಳನ್ನು ಆಕೆಯ ಕೈಗಳಿಗೆ ಕೊಟ್ಟನು.

ನ್ಯಾಯಾಧಿಪತಿಗಳು 17:2

ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು.

ಯೆಶಾಯ 3:19

ಸರ, ಬಳೆ, ಮುಂಡಾಸ,

ಯೆರೆಮಿಯ 2:32

ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.

ಯೆಹೆಜ್ಕೇಲ 23:42

ಅವಳ ಸಂಗಡ ಸುಖವುಳ್ಳ ಸಮೂಹದ ಶಬ್ದವು ಇತ್ತು; ಸಾಧಾರಣ ಮನುಷ್ಯರ ಸಂಗಡ ಅರಣ್ಯದಿಂದ ಸಿಬಾಯರು ಕರೆಯಲ್ಪಟ್ಟು ಅವರು ತಮ್ಮ ಕೈಗಳ ಮೇಲೆ ಕಡಗಗಳನ್ನೂ ತಮ್ಮ ತಲೆಗಳ ಮೇಲೆ ಶೃಂಗಾರವಾದ ಕಿರೀಟವನ್ನೂ ಇಟ್ಟರು.

Interlinear

Choose Theme