ಆದದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು; ಎದ್ದು ಹಾರಾನಿನಲ್ಲಿರುವ ನನ್ನ ಸಹೋದರನಾದ ಲಾಬಾನನ ಬಳಿಗೆ ಓಡಿಹೋಗು.
Cross references
ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು. ತರುವಾಯ ತೆರಹನು ಹಾರಾನಿನಲ್ಲಿ ಸತ್ತನು.
ಹೀಗೆ ಕರ್ತನು ತನಗೆ ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನಿ ನಿಂದ ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು.
ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿಬಂದನು.
ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.
ಆದದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು.
ಅದಕ್ಕೆ ಅವನ ತಾಯಿಯು ಅವನಿಗೆ--ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ; ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದಳು.
ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ ಪದ್ದನ್ ಅರಾಮಿಗೆ ಹೋದದ್ದನ್ನೂ
ಆಗ ಯಾಕೋಬನು ಬೇರ್ಷೆಬದಿಂದ ಖಾರಾ ನಿನ ಕಡೆಗೆ ಹೊರಟನು.
ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.
ಆದದರಿಂದ ಪ್ರಧಾನರೆಲ್ಲರೂ ಕೂಷಿಯ ಮಗನಾದ ಶೆಲೆಮ್ಯನ ಮಗನಾದ ನೆಥನ್ಯನ ಮಗನಾದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿ--ನೀನು ಜನರಿಗೆ ಓದಿ ಹೇಳಿದ ಸುರಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ ಎಂದು ಹೇಳಿದರು; ಹಾಗೆಯೇ ನೇರೀಯನ ಮಗನಾದ ಬಾರೂಕನು ಸುರಳಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.
ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.