Home Bibles ಆದಿಕಾಂಡ 13:1 · ಕನ್ನಡ ಬೈಬಲ್
ಆದಿಕಾಂಡ 13:1 · ಕನ್ನಡ ಬೈಬಲ್

ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತಕ್ಕೊಂಡು ಲೋಟನ ಸಹಿತವಾಗಿ ಐಗುಪ್ತವನ್ನು ಬಿಟ್ಟು ದಕ್ಷಿಣಕ್ಕೆ ಏರಿಹೋದನು.

Cross references

ಆದಿಕಾಂಡ 12:9

ಅಬ್ರಾಮನು ಪ್ರಯಾಣ ಮಾಡಿ ದಕ್ಷಿಣದ ಕಡೆಗೆ ಇನ್ನೂ ಹೋಗುತ್ತಲೇ ಇದ್ದನು.

ಆದಿಕಾಂಡ 20:1

ಅಬ್ರಹಾಮನು ಅಲ್ಲಿಂದ ದಕ್ಷಿಣ ದೇಶದ ಕಾದೇಶಿಗೆ ಪ್ರಯಾಣಮಾಡಿ, ಶೂರಿಗೆ ಮಧ್ಯದಲ್ಲಿ ವಾಸಿಸಿ ಗೆರಾರಿನಲ್ಲಿ ಪ್ರವಾಸಿಯಾಗಿದ್ದನು.

ಆದಿಕಾಂಡ 21:33

ಆಗ ಅಬ್ರಹಾಮನು ಬೇರ್ಷೆಬದಲ್ಲಿ ತೋಪನ್ನು ನೆಟ್ಟು (ಪಿಚುಲ ವೃಕ್ಷ) ನಿತ್ಯದೇವರಾದ ಕರ್ತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹು ದಿವಸ ಪ್ರವಾಸಿಯಾಗಿದ್ದನು.

ಯೆಹೋಶುವ 10:40

ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು.

ಯೆಹೋಶುವ 18:5

ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.

1 ಸಮುವೇಲ 27:10

ಆಗ ಆಕೀಷನುಈ ಹೊತ್ತು ಎಲ್ಲಿ ಸುಲುಕೊಂಡಿರಿ ಅಂದಾಗ ದಾವೀದನು--ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ ಎರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು ಅಂದನು.

2 ಸಮುವೇಲ 24:7

ಅವರು ತೂರಿನ ಭದ್ರ ಸ್ಥಳಕ್ಕೂ ಹಿವ್ವಿಯರ ಕಾನಾ ನ್ಯರ ಎಲ್ಲಾ ಪಟ್ಟಣಗಳಿಗೂ ಅಲ್ಲಿಂದ ಯೆಹೂದದ ದಕ್ಷಿಣಕ್ಕೂ ಬೇರ್ಷೆಬಕ್ಕೂ ಬಂದರು.

Interlinear

Choose Theme