Home Bibles ಯೆಹೋಶುವ 18:5 · ಕನ್ನಡ ಬೈಬಲ್
ಯೆಹೋಶುವ 18:5 · ಕನ್ನಡ ಬೈಬಲ್

ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.

Cross references

ಯೆಹೋಶುವ 15:1

ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್‌ ಅರಣ್ಯದ ದಕ್ಷಿಣ ಭಾಗವಾಗಿದೆ.

ಯೆಹೋಶುವ 15:12

ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.

ಯೆಹೋಶುವ 16:1

ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಕೊಟ್ಟ ಸ್ವಾಸ್ಥ್ಯದ ಭೂಮಿಯು ಯೆರಿಕೋವಿನ ಬಳಿಯಲ್ಲಿರುವ ಯೊರ್ದನಿನಿಂದ ಮೂಡಲಲ್ಲಿರುವ ಯೆರಿಕೋವಿನ ಜಲದ ವರೆಗೂ ಮತ್ತು ಬೇತೇಲಿನ ಬೆಟ್ಟಗಳ ವರೆಗೂ ಇರುವ ಅರಣ್ಯದ ಮಾರ್ಗವಾಗಿ ಹೋಗಿ

ಯೆಹೋಶುವ 16:4

ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯಾಮರು ತಮಗೆ ಬಾಧ್ಯ ವಾಗಿ ತೆಗೆದುಕೊಂಡರು.

ಯೆಹೋಶುವ 19:1

ಎರಡನೇ ಚೀಟು ಸಿಮೆಯೋನನಿಗೆ ಬಿತ್ತು. ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರವಾಯಿತು. ಅವರ ಬಾಧ್ಯತೆ ಯೂದನ ಮಕ್ಕಳ ಬಾಧ್ಯೆತೆಯ ಮಧ್ಯದಲ್ಲಿತ್ತು.

Interlinear

Choose Theme