Home Bibles ಆದಿಕಾಂಡ 13:2 · ಕನ್ನಡ ಬೈಬಲ್
ಆದಿಕಾಂಡ 13:2 · ಕನ್ನಡ ಬೈಬಲ್

ಅಬ್ರಾಮನು ದನಗಳಲ್ಲಿಯೂ ಬೆಳ್ಳಿಯಲ್ಲಿಯೂ ಬಂಗಾರದಲ್ಲಿಯೂ ಬಹು ಧನವಂತನಾಗಿದ್ದನು.

Cross references

ಆದಿಕಾಂಡ 24:1

ಅಬ್ರಹಾಮನು ಮುದುಕನೂ ದಿನಗತಿಸಿದವನೂ ಆಗಿದ್ದನು. ಕರ್ತನು ಅಬ್ರಹಾಮ ನನ್ನು ಎಲ್ಲಾದರಲ್ಲಿ ಆಶೀರ್ವದಿಸಿದನು.

ಆದಿಕಾಂಡ 24:35

ಕರ್ತನು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ದೊಡ್ಡವನಾದನು. ಆತನು ಅವನಿಗೆ ಕುರಿದನಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಟ್ಟಿದ್ದಾನೆ.

ಆದಿಕಾಂಡ 26:12

ಇದಲ್ಲದೆ ಇಸಾಕನು ಆ ದೇಶದಲ್ಲಿ ಬಿತ್ತಿದ ವರುಷದಲ್ಲಿಯೇ ನೂರರಷ್ಟು ಫಲವನ್ನು ಹೊಂದಿ ದನು. ಕರ್ತನು ಅವನನ್ನು ಆಶೀರ್ವದಿಸಿದನು.

ಆದಿಕಾಂಡ 26:13

ಅವನು ಅತಿ ದೊಡ್ಡವನಾಗುವ ವರೆಗೆ ಕ್ರಮೇಣ ಅಭಿವೃದ್ಧಿಯಾಗುತ್ತಾ ಬಂದನು.

ಆದಿಕಾಂಡ 26:14

ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡೂ ಬಹಳ ಮಂದಿ ಸೇವಕರೂ ಇದ್ದರು. ಆದದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೇಕಿಚ್ಚುಪಟ್ಟರು.

ಆದಿಕಾಂಡ 30:43

ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದದ್ದರಿಂದ ಬಹು ಕುರಿಗಳೂ ದಾಸದಾಸಿ ಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.

ದ್ವಿತೀಯೋಪದೇಶಕಾಂಡ 8:18

ನಿನ್ನ ದೇವ ರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳಬೇಕು; ಈ ಹೊತ್ತು ಇರುವಂತೆ ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ತನ್ನ ಒಡಂಬಡಿಕೆಯನ್ನು ಸ್ಥಾಪಿಸುವ ಹಾಗೆ ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿನಗೆ ಕೊಡುವಾತನು ಆತನೇ.

1 ಸಮುವೇಲ 2:7

ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ.

ಯೋಬ 1:3

ಅವನ ಸಂಪತ್ತು--ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡು ಎತ್ತುಗಳು, ಐನೂರು ಹೆಣ್ಣು ಕತ್ತೆಗಳೂ ಮತ್ತು ಬಹು ಸೇವಕರ ಸಮೂಹವಿತ್ತು. ಹೀಗೆ ಆ ಮನುಷ್ಯನು ಎಲ್ಲಾ ಮೂಡಣದವರಿಗಿಂತಲೂ ಬಹು ಸ್ವಾಸ್ತ್ಯವುಳ್ಳವ ನಾಗಿದ್ದನು.

ಯೋಬ 1:10

ನೀನು ಅವನಿಗೂ ಅವನ ಮನೆಗೂ ಅವನಿಗೆ ಉಂಟಾದ ಎಲ್ಲವುಗಳಿಗೂ ಸುತ್ತಲೂ ಬೇಲಿ ಕಟ್ಟಿದೆಯಲ್ಲಾ? ಅವನ ಕೈ ಕೆಲಸವನ್ನು ಆಶೀರ್ವದಿಸಿದಿ; ಅವನ ಸಂಪತ್ತು ದೇಶದಲ್ಲಿ ಹಬ್ಬಿಯದೆ.

ಯೋಬ 22:21

ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು.

ಕೀರ್ತನೆಗಳು 112:1

ನೀವು ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಟ್ಟು ಆತನ ಆಜ್ಞೆಗಳಲ್ಲಿ ಬಹಳವಾಗಿ ಸಂತೋಷಿಸುವ ಮನುಷ್ಯನು ಧನ್ಯನು.

ಸಾಮೇತಿಗಳು 3:9

ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.

ಸಾಮೇತಿಗಳು 10:22

ಕರ್ತನ ಆರ್ಶೀ ವಾದವು ಐಶ್ವರ್ಯವನ್ನುಂಟು ಮಾಡುವದು. ಅದ ರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವ ದಿಲ್ಲ.

ಮತ್ತಾಯ 6:33

ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.

1 ತಿಮೋಥೆಯ 4:8

ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.

Interlinear

Choose Theme