ಅಬ್ರಾಮನು ಪ್ರಯಾಣ ಮಾಡಿ ದಕ್ಷಿಣದ ಕಡೆಗೆ ಇನ್ನೂ ಹೋಗುತ್ತಲೇ ಇದ್ದನು.
Cross references
ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತಕ್ಕೊಂಡು ಲೋಟನ ಸಹಿತವಾಗಿ ಐಗುಪ್ತವನ್ನು ಬಿಟ್ಟು ದಕ್ಷಿಣಕ್ಕೆ ಏರಿಹೋದನು.
ಅವನು ತನ್ನ ಪ್ರಯಾಣಗಳಲ್ಲಿ ದಕ್ಷಿಣದಿಂದ ಬೇತೇಲಿಗೆ ಅಂದರೆ ಮೊದಲು ಬೇತೇಲಿಗೆ ಆಯಿಗೆ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೂ
ಅಬ್ರಹಾಮನು ಅಲ್ಲಿಂದ ದಕ್ಷಿಣ ದೇಶದ ಕಾದೇಶಿಗೆ ಪ್ರಯಾಣಮಾಡಿ, ಶೂರಿಗೆ ಮಧ್ಯದಲ್ಲಿ ವಾಸಿಸಿ ಗೆರಾರಿನಲ್ಲಿ ಪ್ರವಾಸಿಯಾಗಿದ್ದನು.
ದೇವರು ನನ್ನ ತಂದೆಯ ಮನೆಯಿಂದ ನನ್ನನ್ನು ದೇಶಾಂತರಕ್ಕೆ ಹೋಗಲು ಕರೆದಾಗ ನಾನು ಅವಳಿಗೆ--ನೀನು ನನಗೆ ತೋರಿಸತಕ್ಕ ದಯವು ಯಾವದಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ-- ಇವನು ನನ್ನ ಅಣ್ಣನೆಂಬದಾಗಿ ಹೇಳೆಂದು ಅಂದೆನು.
ಆಗ ಇಸಾಕನು ಲಹೈರೋಯಿ ಎಂಬ ಬಾವಿಯ ಮಾರ್ಗವಾಗಿ ಬಂದನು. ಅವನು ದಕ್ಷಿಣ ದೇಶದಲ್ಲಿ ವಾಸವಾಗಿದ್ದನು.
ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋದರು.
ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು.