Home Bibles 2 ದಿನವೃತ್ತಾಂತ 17:12 · ಕನ್ನಡ ಬೈಬಲ್
2 ದಿನವೃತ್ತಾಂತ 17:12 · ಕನ್ನಡ ಬೈಬಲ್

ಹೀಗೆ ಯೆಹೋಷಾಫಾಟನು ಬರಬರುತ್ತಾ ಬಹಳ ದೊಡ್ಡವನಾಗಿ ಯೆಹೂದದಲ್ಲಿ ಕೋಟೆ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

Cross references

1 ದಿನವೃತ್ತಾಂತ 29:25

ಇದಲ್ಲದೆ ಕರ್ತನು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ ಇಸ್ರಾಯೇ ಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸ ನಿಗಾದರೂ ಇಲ್ಲದಂಥ ರಾಜ್ಯದ ಮಹಿಮೆಯನ್ನು ಅವನಿಗೆ ಕೊಟ್ಟನು.

2 ದಿನವೃತ್ತಾಂತ 8:2

ಹೂರಾ ಮನು ಸೊಲೊಮೋನನಿಗೆ ತಿರಿಗಿ ಕೊಟ್ಟ ಪಟ್ಟಣಗ ಳನ್ನು ಸೊಲೊಮೋನನು ಕಟ್ಟಿಸಿ ಇಸ್ರಾಯೇಲ್‌ ಮಕ್ಕಳನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು.

2 ದಿನವೃತ್ತಾಂತ 8:4

ಅವನು ಅರಣ್ಯದಲ್ಲಿರುವ ತದ್ಮೋರನ್ನೂ ಹಮಾತಿನಲ್ಲಿರುವ ಉಗ್ರಾಣದ ಪಟ್ಟಣ ಗಳನ್ನೂ ಕಟ್ಟಿಸಿದನು.

2 ದಿನವೃತ್ತಾಂತ 8:6

ಸೊಲೊಮೋನನು ಯೆರೂಸಲೇಮಿನಲ್ಲಿಯೂ ಲೆಬ ನೋನಿನಲ್ಲಿಯೂ ತಾನು ಆಳುವ ಸಮಸ್ತ ದೇಶದ ಲ್ಲೆಲ್ಲಾ ಕಟ್ಟಿಸಲು ಇಚ್ಛೆಯಾದದ್ದನ್ನು ಕಟ್ಟಿಸಿದನು.

2 ದಿನವೃತ್ತಾಂತ 11:5

ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು.

2 ದಿನವೃತ್ತಾಂತ 11:11

ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.

2 ದಿನವೃತ್ತಾಂತ 11:12

ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು.

2 ದಿನವೃತ್ತಾಂತ 14:6

ಇದಲ್ಲದೆ ಅವನು ಯೆಹೂದದಲ್ಲಿ ಕೋಟೆ ಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ದೇಶವು ಶಾಂತವಾ ಗಿತ್ತು. ಕರ್ತನು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರುಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.

2 ದಿನವೃತ್ತಾಂತ 18:1

ಯೆಹೋಷಾಫಾಟನಿಗೆ ಐಶ್ವರ್ಯವೂ ಘನತೆಯೂ ಅಧಿಕವಾಗಿರುವಾಗ ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.

2 ದಿನವೃತ್ತಾಂತ 26:6

ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ ಗತ್‌ ಗೋಡೆಯನ್ನೂ ಯಬ್ನೆಯ ಗೋಡೆಯನ್ನೂ ಅಷ್ಡೋದಿನ ಗೋಡೆಯನ್ನೂ ಕೆಡವಿ ಬಿಟ್ಟು ಫಿಲಿಷ್ಟಿಯರ ಮಧ್ಯದಲ್ಲಿ ಅಷ್ಡೋ ದಿನ ಬಳಿಯಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.

2 ದಿನವೃತ್ತಾಂತ 26:10

ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.

2 ದಿನವೃತ್ತಾಂತ 27:4

ಇದಲ್ಲದೆ ಯೆಹೂದ ಪರ್ವತಗಳಲ್ಲಿ ಪಟ್ಟಣಗಳನ್ನೂ ಅರಣ್ಯದಲ್ಲಿ ಕೋಟೆ ಗಳನ್ನೂ ಗಡೀಸ್ಥಾನಗಳನ್ನೂ ಕಟ್ಟಿಸಿದನು.

2 ದಿನವೃತ್ತಾಂತ 32:5

ಇದಲ್ಲದೆ ಅವನು ತನ್ನನ್ನು ಬಲಪಡಿಸಿಕೊಂಡು ಕೆಡವಲ್ಪಟ್ಟ ಗೋಡೆಯನ್ನೆಲ್ಲಾ ಕಟ್ಟಿಸಿ ಗೋಪುರಗಳ ಪರ್ಯಂತರ ಅದನ್ನು ಎತ್ತರ ಮಾಡಿ ಅದರ ಹೊರ ಭಾಗದಲ್ಲಿ ಮತ್ತೊಂದು ಗೋಡೆಯನ್ನು ಕಟ್ಟಿಸಿ ದಾವೀ ದನ ಪಟ್ಟಣದಲ್ಲಿರುವ ಮಿಲ್ಲೋವನ್ನು ದುರಸ್ತುಮಾಡಿ ಈಟಿಗಳನ್ನೂ ಗುರಾಣಿಗಳನ್ನೂ ಬಹಳವಾಗಿ ಮಾಡಿಸಿ ದನು.

2 ದಿನವೃತ್ತಾಂತ 32:27

ಹಿಜ್ಕೀಯನಿಗೆ ಅತ್ಯಧಿಕವಾದ ಐಶ್ವರ್ಯವೂ ಘನವೂ ಇದ್ದದ್ದರಿಂದ ಅವನು ಬೆಳ್ಳಿಬಂಗಾರ ರತ್ನ ಸುಗಂಧದ್ರವ್ಯ ಗುರಾಣಿಗಳಿಗೋಸ್ಕರವೂ ಎಲ್ಲಾ ವಿಧದ ಮನೋಹರವಾದ ಆಭರಣಗಳಿಗೋಸ್ಕರವೂ ತನಗೆ ಬೊಕ್ಕಸಗಳನ್ನು ಕಟ್ಟಿಸಿದನು.

Interlinear

Choose Theme