Home Bibles 2 ದಿನವೃತ್ತಾಂತ 18:1 · ಕನ್ನಡ ಬೈಬಲ್
2 ದಿನವೃತ್ತಾಂತ 18:1 · ಕನ್ನಡ ಬೈಬಲ್

ಯೆಹೋಷಾಫಾಟನಿಗೆ ಐಶ್ವರ್ಯವೂ ಘನತೆಯೂ ಅಧಿಕವಾಗಿರುವಾಗ ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.

Cross references

1 ಅರಸುಗಳು 16:31

ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಲ್ಲಿ ನಡೆಯು ವದು ಅವನಿಗೆ ಅಲ್ಪವಾಗಿತ್ತು; ಅವನು ಚೀದೋನ್ಯರ ಅರಸನಾಗಿರುವ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡ ಬಿದ್ದನು.

1 ಅರಸುಗಳು 21:25

ಆದರೆ ತನ್ನ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿಸಲ್ಪಟ್ಟು ಕರ್ತನ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿಬಿಟ್ಟ ಅಹಾಬನ ಹಾಗೆ ಯಾವನೂ ಇರಲಿಲ್ಲ.

1 ಅರಸುಗಳು 22:1

ಆದರೆ ಅರಾಮ್ಯರಿಗೂ ಇಸ್ರಾಯೇಲ್ಯ ರಿಗೂ ಮೂರು ವರುಷ ಯುದ್ಧವಿಲ್ಲದೆ ಇತ್ತು.

1 ಅರಸುಗಳು 22:45

ಯೆಹೋಷಾಫಾಟನ ಇತರ ಕ್ರಿಯೆ ಗಳೂ ಅವನು ತೋರಿಸಿದ ಪರಾಕ್ರಮವೂ ಅವನು ಯುದ್ಧ ಮಾಡಿದ ವಿಧವೂ ಯೆಹೂದದ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

2 ಅರಸುಗಳು 8:18

ಅಹಾಬನ ಮನೆಯವರು ಮಾಡಿದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು; ಯಾಕಂದರೆ ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದಳು.

2 ಅರಸುಗಳು 8:26

ಅಹ ಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿದನು. ಅವನ ತಾಯಿ ಅತಲ್ಯಳು; ಅವಳು ಇಸ್ರಾ ಯೇಲಿನ ಅರಸನಾದ ಒಮ್ರಿಯ ಮಗಳು.

2 ಅರಸುಗಳು 11:1

ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ನೋಡಿ ಎದ್ದು ರಾಜ ಸಂತಾನದವರನ್ನೆಲ್ಲಾ ನಾಶಮಾಡಿದಳು.

2 ದಿನವೃತ್ತಾಂತ 1:11

ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು.

2 ದಿನವೃತ್ತಾಂತ 17:5

ಆದದರಿಂದ ಕರ್ತನು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದನು. ಯೆಹೂದ ವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟ ದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ಅಧಿಕ ವಾಗಿ ದೊರಕಿತು.

2 ದಿನವೃತ್ತಾಂತ 17:12

ಹೀಗೆ ಯೆಹೋಷಾಫಾಟನು ಬರಬರುತ್ತಾ ಬಹಳ ದೊಡ್ಡವನಾಗಿ ಯೆಹೂದದಲ್ಲಿ ಕೋಟೆ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

2 ದಿನವೃತ್ತಾಂತ 18:31

ಆದದರಿಂದ ರಥಗಳ ಅಧಿಪತಿ ಗಳು ಯೆಹೋಷಾಫಾಟನನ್ನು ನೋಡಿದಾಗ--ನಿಶ್ಚ ಯವಾಗಿ ಇವನೇ ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿಕೊಳ್ಳಲು ಕರ್ತನು ಅವ ನಿಗೆ ಸಹಾಯಕೊಟ್ಟನು. ಇದಲ್ಲದೆ ದೇವರು ಅವರನ್ನು ಅವನ ಕಡೆಯಿಂದ ತೊಲಗಿಸಿದನು.

2 ದಿನವೃತ್ತಾಂತ 19:2

ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.

2 ದಿನವೃತ್ತಾಂತ 20:35

ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು.

2 ದಿನವೃತ್ತಾಂತ 21:6

ಅಹಾಬನ ಮನೆಯವರು ನಡೆದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಅಹಾಬನ ಮಗಳು ಅವನಿಗೆ ಹೆಂಡತಿ ಯಾಗಿದ್ದಳು. ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು,

2 ದಿನವೃತ್ತಾಂತ 22:2

ಅಹಜ್ಯನು ಆಳಲು ಆರಂಭಿಸಿದಾಗ ನಾಲ್ವತ್ತೆರಡು ವರುಷದವ ನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿ ದನು. ಅವನ ತಾಯಿಯ ಹೆಸರು ಅತಲ್ಯಳು; ಈಕೆಯು ಒಮ್ರಿಯ ಮಗಳಾಗಿದ್ದಳು.

ಮತ್ತಾಯ 6:33

ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.

2 ಕೊರಿಂಥದವರಿಗೆ 6:14

ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?

Interlinear

Choose Theme