ಇದಲ್ಲದೆ ಕರ್ತನು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ ಇಸ್ರಾಯೇ ಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸ ನಿಗಾದರೂ ಇಲ್ಲದಂಥ ರಾಜ್ಯದ ಮಹಿಮೆಯನ್ನು ಅವನಿಗೆ ಕೊಟ್ಟನು.
Cross references
ಕರ್ತನು ಯೆಹೋಶುವನಿಗೆ--ನಾನು ಮೋಶೆಯ ಸಂಗಡ ಇದ್ದ ಪ್ರಕಾರ ನಿನ್ನ ಸಂಗಡ ಇರುವದನ್ನು ಇಸ್ರಾಯೇಲ್ಯರೆಲ್ಲರು ತಿಳಿಯುವ ಹಾಗೆ ಈ ದಿನ ನಿನ್ನನ್ನು ಅವರ ಮುಂದೆ ಘನಪಡಿಸಲು ಪ್ರಾರಂಭಿಸು ವೆನು.
ಆ ದಿನದಲ್ಲಿ ಕರ್ತನು ಯೆಹೋಶುವ ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಭಯಪಟ್ಟ ಹಾಗೆಯೇ ಅವನು ಬದುಕಿದ ದಿನಗಳಲ್ಲೆಲ್ಲಾ ಅವನಿಗೂ ಭಯಪಟ್ಟರು.
ಕರ್ತನು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದನೋ ಹಾಗೆಯೇ ಸೊಲೊ ಮೋನನ ಸಂಗಡ ಇದ್ದು ನನ್ನ ಒಡೆಯನೂ ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನ ವನ್ನು ಅಧಿಕವಾಗಮಾಡಲಿ ಅಂದನು.
ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.
ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ.
ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.
ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.
ನೀನು ಅವನನ್ನು ಹೆಚ್ಚಿಸುವ ಹಾಗೆಯೂ ಅವನ ಮೇಲೆ ನಿನ್ನ ಹೃದಯ ಇಡುವ ಹಾಗೆಯೂ
ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಅಭಿವೃದ್ಧಿ ಹೊಂದಿ ದೊಡ್ಡವನಾಗಿದ್ದೆನು.
ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.
ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು. ಕರ್ತನಾದ ಯೇಸು ವಿನ ಹೆಸರು ಘನಹೊಂದಿತು.
ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ