Home Bibles 2 ದಿನವೃತ್ತಾಂತ 27:4 · ಕನ್ನಡ ಬೈಬಲ್
2 ದಿನವೃತ್ತಾಂತ 27:4 · ಕನ್ನಡ ಬೈಬಲ್

ಇದಲ್ಲದೆ ಯೆಹೂದ ಪರ್ವತಗಳಲ್ಲಿ ಪಟ್ಟಣಗಳನ್ನೂ ಅರಣ್ಯದಲ್ಲಿ ಕೋಟೆ ಗಳನ್ನೂ ಗಡೀಸ್ಥಾನಗಳನ್ನೂ ಕಟ್ಟಿಸಿದನು.

Cross references

ಯೆಹೋಶುವ 14:12

ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು.

2 ದಿನವೃತ್ತಾಂತ 11:5

ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು.

2 ದಿನವೃತ್ತಾಂತ 14:7

ಅವನು ಯೆಹೂದದವರಿಗೆ--ದೇಶವು ನಮ್ಮ ಮುಂದೆ ಇರು ವಾಗ ಈ ಪಟ್ಟಣಗಳನ್ನು ಕಟ್ಟಿಸಿ ಅವುಗಳ ಸುತ್ತಲೂ ಗೋಡೆಗಳನ್ನೂ ಗೋಪುರಗಳನ್ನೂ ಬಾಗಲುಗಳನ್ನೂ ಅಗುಳಿಗಳನ್ನೂ ಮಾಡೋಣ; ಯಾಕಂದರೆ ನಾವು ನಮ್ಮ ದೇವರಾದ ಕರ್ತನನ್ನು ಹುಡುಕಿದೆವು; ನಾವು ಆತನನ್ನು ಹುಡುಕಿದ್ದರಿಂದ ಆತನು ಎಲ್ಲಾ ಕಡೆಯಲ್ಲಿ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಅಂದನು.

2 ದಿನವೃತ್ತಾಂತ 17:12

ಹೀಗೆ ಯೆಹೋಷಾಫಾಟನು ಬರಬರುತ್ತಾ ಬಹಳ ದೊಡ್ಡವನಾಗಿ ಯೆಹೂದದಲ್ಲಿ ಕೋಟೆ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

2 ದಿನವೃತ್ತಾಂತ 26:9

ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಲ ಬಳಿಯಲ್ಲಿಯೂ ತಗ್ಗಿನ ಬಾಗಲ ಬಳಿಯಲ್ಲಿಯೂ ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿ ಅವುಗಳನ್ನು ಬಲಪಡಿಸಿದನು.

ಲೂಕ 1:39

ಆ ದಿವಸಗಳಲ್ಲಿ ಮರಿಯಳು ಎದ್ದು ಬೆಟ್ಟದ ಸೀಮೆಯ ಯೆಹೂದದ ಪಟ್ಟಣಕ್ಕೆ ಅವಸರದಿಂದ ಹೋಗಿ

Interlinear

Choose Theme