ಹೇಗಂದರೆ ನಾನು ಮಾಡುವದನ್ನು ನಾನೇ ಒಪ್ಪುವದಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಛಿಸುತ್ತೇನೋ ಅದನ್ನು ಮಾಡದೆ ನಾನು ವಿರೋಧಿಸುವದನ್ನು ಮಾಡುತ್ತೇನೆ.
Cross references
ಪಾಪವನ್ನು ಮಾಡದವನು ಯಾವನೂ ಇಲ್ಲದ್ದ ರಿಂದ ಅವರು ನಿನಗೆ ವಿರೋಧವಾಗಿ ಪಾಪ ಮಾಡಲು ನೀನು ಅವರ ಮೇಲೆ ಕೋಪಿಸಿಕೊಂಡು ದೂರವಾ ದರೂ ಸವಿಾಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಒಯ್ಯಲ್ಪಡುವ ಹಾಗೆ ನೀನು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ
ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.
ತನ್ನ ತಪ್ಪುಗಳನ್ನು ತಿಳಿದುಕೊಳ್ಳುವವನಾರು? ಗುಪ್ತವಾದ ಪಾಪಗಳಿಂದ ನನ್ನನ್ನು ನಿರ್ಮಲಮಾಡು.
ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
ಅಕ್ರಮಗಳು ನನಗೆ ವಿರೋಧವಾಗಿ ಬಲಗೊಂಡಿವೆ; ನಮ್ಮ ದ್ರೋಹಗಳನ್ನಾದರೋ ನೀನು ತೊಳೆದು ಬಿಡುವಿ.
ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.
ಮಾರ್ಗದಲ್ಲಿ ಅಶುದ್ಧರಾಗದವರೂ ಕರ್ತನ ನ್ಯಾಯಪ್ರಮಾಣದಲ್ಲಿ ನಡೆದುಕೊಳ್ಳುವವರೂ ಧನ್ಯರು.
ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವೆನು; ನೀನು ನನ್ನ ಹೃದಯವನ್ನು ವಿಶಾಲಮಾಡುತ್ತೀ.
ನಿನ್ನ ಕಟ್ಟಳೆ ಗಳನ್ನು ಬಯಸುವ ನನ್ನನ್ನು ನಿನ್ನ ನೀತಿಯಿಂದ ಚೈತನ್ಯಪಡಿಸು.
ನಾನು ನಿನ್ನ ಕಟ್ಟಳೆಗಳಿಂದ ವಿವೇಕಿ ಯಾಗಿದ್ದೇನೆ. ಆದದರಿಂದ ಮೋಸದ ಮಾರ್ಗಗ ಳನ್ನೆಲ್ಲಾ ಹಗೆಮಾಡಿದ್ದೇನೆ.
ನಾನು ಚಂಚಲ ರನ್ನು ಹಗೆಮಾಡುತ್ತೇನೆ; ಆದರೆ ನಿನ್ನ ನ್ಯಾಯಪ್ರಮಾಣ ವನ್ನು ಪ್ರೀತಿಮಾಡುತ್ತೇನೆ.
ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
ಸುಳ್ಳನ್ನು ಹಗೆಮಾಡಿ ಅಸಹ್ಯಿಸಿಬಿಡುತ್ತೇನೆ. ನಿನ್ನ ನ್ಯಾಯಪ್ರಮಾಣವನ್ನು ಪ್ರೀತಿಮಾಡುತ್ತೇನೆ.
ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು.
ಪಾಪ ಮಾಡದೆ ಒಳ್ಳೇದನ್ನೇ ನಡಿಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ.
ಕೆಟ್ಟದ್ದನ್ನು ದ್ವೇಷಿಸಿರಿ; ಒಳ್ಳೇದನ್ನು ಪ್ರೀತಿಸಿರಿ ಮತ್ತು ಬಾಗಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ; ಒಂದು ವೇಳೆ ಸೈನ್ಯಾಧಿಪತಿಯಾದ ಕರ್ತನು ಯೋಸೇ ಫನ ಉಳಿದವರನ್ನು ಕನಿಕರಿಸಬಹುದು.