ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
Cross references
ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತದ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.
ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡಬಾರದು. ಯಾಕಂದರೆ ಕರ್ತನು ತಿಳುವಳಿಕೆಯುಳ್ಳ ದೇವರು. ಆತನಿಂದ ಕ್ರಿಯೆಗಳು ತೂಗಲ್ಪಡುತ್ತವೆ.
ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು.
ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.
ನಾನು ನಿನ್ನ ಕಟ್ಟಳೆಗಳಿಂದ ವಿವೇಕಿ ಯಾಗಿದ್ದೇನೆ. ಆದದರಿಂದ ಮೋಸದ ಮಾರ್ಗಗ ಳನ್ನೆಲ್ಲಾ ಹಗೆಮಾಡಿದ್ದೇನೆ.
ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
ಕರ್ತನು ಉನ್ನತನಾಗಿದ್ದರೂ ದೀನನನ್ನು ಗಮನಿ ಸುತ್ತಾನೆ. ಆದರೆ ಗರ್ವಿಷ್ಟನನ್ನು ದೂರದಿಂದ ತಿಳು ಕೊಳ್ಳುತ್ತಾನೆ.
ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು.
ದುಷ್ಟನೂ ಕೆಡುಕನೂ ವಕ್ರಬಾಯಿಂದ ನಡೆದು ಕೊಳ್ಳುವನು.
ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ:
ಅಸತ್ಯಗಳನ್ನು ಆಡುವ ಸುಳ್ಳು ಸಾಕ್ಷಿ ಮತ್ತು ಸಹೋ ದರರಲ್ಲಿ ವೈಷಮ್ಯವನ್ನು ಬಿತ್ತುವವನು.
ನೀತಿವಂತರ ಬಾಯಿಯು ಜ್ಞಾನವನ್ನು ಫಲಿಸುತ್ತದೆ; ಮೂರ್ಖನ ನಾಲಿಗೆಯು ಕತ್ತರಿಸಲ್ಪಡುವದು.ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ.
ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಕರ್ತನಿಗೆ ಅಸಹ್ಯ. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ.
ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
ಕೆಟ್ಟದ್ದನ್ನು ದ್ವೇಷಿಸಿರಿ; ಒಳ್ಳೇದನ್ನು ಪ್ರೀತಿಸಿರಿ ಮತ್ತು ಬಾಗಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ; ಒಂದು ವೇಳೆ ಸೈನ್ಯಾಧಿಪತಿಯಾದ ಕರ್ತನು ಯೋಸೇ ಫನ ಉಳಿದವರನ್ನು ಕನಿಕರಿಸಬಹುದು.
ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.
ನಿಮ್ಮ ಹೃದಯಗಳಲ್ಲಿ ಒಬ್ಬರ ಮೇಲೊ ಬ್ಬರು ಕೇಡನ್ನು ಕಲ್ಪಿಸದಿರ್ರಿ; ಸುಳ್ಳು ಪ್ರಮಾಣವನ್ನು ಪ್ರೀತಿಮಾಡಿದಿರಿ; ಇವುಗಳೆಲ್ಲವೂ ನಾನು ಹಗೆ ಮಾಡುವಂಥವುಗಳೇ ಎಂದು ಕರ್ತನು ಹೇಳುತ್ತಾನೆ.
ಪ್ರೀತಿಯು ನಿಷ್ಕಪಟವಾಗಿರಲಿ ಕೆಟ್ಟತನವನ್ನು ಹೇಸಿ ಕೊಂಡು ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.
ಸಕಲ ವಿಧವಾದ ಕೆಟ್ಟತನದ ತೋರಿಕೆಗೆ ದೂರವಾಗಿರ್ರಿ.
ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.