ನಿನಗೆ ನಂಬಿಕೆಯಿದೆಯೋ? ದೇವರ ಸನ್ನಿಧಿಯಲ್ಲಿ ಅದು ನಿನಗೇ ಇರಲಿ. ಒಬ್ಬನು ತಾನು ಒಪ್ಪುವ ವಿಷಯದಲ್ಲಿ ತನ್ನನ್ನು ತಾನು ಖಂಡಿಸಿ ಕೊಳ್ಳದಿದ್ದರೆ ಅವನು ಧನ್ಯನು.ಸಂಶಯಪಟ್ಟು ಉಣ್ಣುವವನು ದಂಡಿಸಲ್ಪಡುವನು; ಯಾಕಂದರೆ ಅವನು ನಂಬಿಕೆಯಿಂದ ಉಣ್ಣುವದಿಲ್ಲ. ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ.
Cross references
ಈ ವಿಷಯ ದೇವರ ಮುಂದೆಯೂ ಮನುಷ್ಯರ ಮುಂದೆಯೂ ಯಾವಾಗಲೂ ನಾನು ದೋಷರಹಿತವಾದ ಮನಸ್ಸಾಕ್ಷಿಯುಳ್ಳವನಾಗಿರುವಂತೆ ಅಭ್ಯಾಸಮಾಡಿಕೊಳ್ಳುತ್ತೇನೆ.
ಹೇಗಂದರೆ ನಾನು ಮಾಡುವದನ್ನು ನಾನೇ ಒಪ್ಪುವದಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಛಿಸುತ್ತೇನೋ ಅದನ್ನು ಮಾಡದೆ ನಾನು ವಿರೋಧಿಸುವದನ್ನು ಮಾಡುತ್ತೇನೆ.
ಅಯ್ಯೋ, ನಾನು ಎಂಥ ನಿರ್ಗತಿಕನಾದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹ ದಿಂದ ನನ್ನನ್ನು ಬಿಡಿಸುವವನು ಯಾರು?ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ; ಹೀಗೆ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೂ ಶರೀರದಿಂದ ಪಾಪವೆಂಬ ನಿಯಮಕ್ಕೂ ಆಳಾಗಿದ್ದೇನೆ.
ಒಬ್ಬನು ಯಾವದನ್ನಾ ದರೂ ತಿನ್ನಬಹುದೆಂದು ನಂಬುತ್ತಾನೆ; ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ;
ಒಬ್ಬನು ಒಂದು ದಿವಸಕ್ಕಿಂತ ಮತ್ತೊಂದು ದಿವಸವನ್ನು ವಿಶೇಷವೆಂದು ಎಣಿಸುತ್ತಾನೆ. ಮತ್ತೊಬ್ಬನು ಎಲ್ಲಾ ದಿವಸಗಳನ್ನೂ ಒಂದೇ ರೀತಿಯಾಗಿ ಎಣಿಸುತ್ತಾನೆ; ಹೀಗಿರಲಾಗಿ ಪ್ರತಿಯೊಬ್ಬನು ತನ್ನ ಮನಸ್ಸಿ ನಲ್ಲಿ ನಿಶ್ಚಯಿಸಿಕೊಂಡಿರಲಿ.
ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.
ಸಂಶಯಪಟ್ಟು ಉಣ್ಣುವವನು ದಂಡಿಸಲ್ಪಡುವನು; ಯಾಕಂದರೆ ಅವನು ನಂಬಿಕೆಯಿಂದ ಉಣ್ಣುವದಿಲ್ಲ. ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ.
ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.
ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.
ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ.
ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಭರವಸ ವುಂಟು.