Home Bibles ಕೀರ್ತನೆಗಳು 99:6 · ಕನ್ನಡ ಬೈಬಲ್
ಕೀರ್ತನೆಗಳು 99:6 · ಕನ್ನಡ ಬೈಬಲ್

ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.

Cross references

ನಿರ್ಗಮಕಾಂಡ 14:15

ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್‌ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.

ನಿರ್ಗಮಕಾಂಡ 15:25

ಅವನು ಕರ್ತನಿಗೆ ಮೊರೆಯಿಟ್ಟನು; ಆಗ ಕರ್ತನು ಅವನಿಗೆ ಒಂದು ಮರವನ್ನು ತೋರಿಸಿದನು; ಅವನು ಅದನ್ನು ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಗಿ ಮಾಡಲ್ಪಟ್ಟಿತು; ಅಲ್ಲಿ ಆತನು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿ, ಅಲ್ಲಿಯೇ ಅವರನ್ನು ಪರೀಕ್ಷಿಸಿದನು.

ನಿರ್ಗಮಕಾಂಡ 17:4

ಆಗ ಮೋಶೆಯು ಕರ್ತನಿಗೆ ಮೊರೆಯಿಟ್ಟು--ಈ ಜನರಿಗೆ ನಾನೇನು ಮಾಡಲಿ? ಅವರು ಬಹಳ ಮಟ್ಟಿಗೆ ನನ್ನನ್ನು ಕಲ್ಲೆಸೆಯುವದಕ್ಕಿದ್ದಾರೆ ಅಂದನು.

ನಿರ್ಗಮಕಾಂಡ 24:6

ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು.

ನಿರ್ಗಮಕಾಂಡ 29:11

ತರುವಾಯ ನೀನು ಆ ಹೋರಿಯನ್ನು ಕರ್ತನ ಮುಂದೆ ಸಭೆಯ ಗುಡಾರದ ಬಾಗಲಲ್ಲಿ ವಧಿಸಬೇಕು.

ನಿರ್ಗಮಕಾಂಡ 32:11

ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು?

ನಿರ್ಗಮಕಾಂಡ 32:30

ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.

ನಿರ್ಗಮಕಾಂಡ 33:12

ಆಗ ಮೋಶೆಯು ಕರ್ತನಿಗೆ--ನೋಡು, ನೀನು ಜನರನ್ನು ಕರೆದುಕೊಂಡು ಹೋಗು ಎಂದು ನನಗೆ ಹೇಳಿದ್ದೀ ಯಾರನ್ನು ನನ್ನ ಸಂಗಡ ಕಳುಹಿಸುವಿ ಎಂದು ನೀನು ನನಗೆ ತಿಳಿಸಲಿಲ್ಲ. ಆದಾಗ್ಯೂ ನೀನು--ನಾನು ನಿನ್ನ ಹೆಸರಿನ ಮೂಲಕ ನಿನ್ನನ್ನು ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆ ಯಿತು ಎಂದು ಹೇಳಿದ್ದೀಯಲ್ಲಾ.

ನಿರ್ಗಮಕಾಂಡ 40:23

ರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿ ಯನ್ನು ಕರ್ತನ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.

ಲೇವ್ಯಕಾಂಡ 8:1

ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ --

ಅಂಕೆಗಳ ಪುಸ್ತಕ 14:13

ಆಗ ಮೋಶೆ ಕರ್ತನಿಗೆ--ಹಾಗಾದರೆ ಐಗುಪ್ತ್ಯರು ಅದನ್ನು ಕೇಳುವರು; ನೀನು ಈ ಜನರನ್ನು ನಿನ್ನ ಬಲದೊಂದಿಗೆ ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಿಯಲ್ಲಾ!

ಅಂಕೆಗಳ ಪುಸ್ತಕ 16:21

ಈ ಸಭೆಯ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರ ದಲ್ಲಿ ದಹಿಸಿಬಿಡುತ್ತೇನೆ ಅಂದನು.

ಅಂಕೆಗಳ ಪುಸ್ತಕ 16:22

ಆಗ ಅವರು ಬೋರಲು ಬಿದ್ದು--ಓ ದೇವರೇ, ಎಲ್ಲಾ ಶರೀರಾತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀನು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳು ತ್ತೀಯೋ ಅಂದರು.

ಅಂಕೆಗಳ ಪುಸ್ತಕ 16:47

ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು.

1 ಸಮುವೇಲ 7:9

ಆಗ ಸಮುವೇಲನು ಹಾಲು ಕುಡಿಯುವ ಕುರಿಮರಿಯನ್ನು ತೆಗೆದುಕೊಂಡು ಕರ್ತ ನಿಗೆ ಪೂರ್ಣ ದಹನಬಲಿಯನ್ನು ಅರ್ಪಿಸಿದನು; ಸಮುವೇಲನು ಇಸ್ರಾಯೇಲಿಗೋಸ್ಕರ ಕರ್ತನಿಗೆ ಮೊರೆಯಿಟ್ಟನು. ಕರ್ತನು ಅವನಿಗೆ ಕಿವಿಗೊಟ್ಟನು.

1 ಸಮುವೇಲ 12:18

ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.

ಯೆರೆಮಿಯ 15:1

ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

Interlinear

Choose Theme