Home Bibles ನಿರ್ಗಮಕಾಂಡ 14:15 · ಕನ್ನಡ ಬೈಬಲ್
ನಿರ್ಗಮಕಾಂಡ 14:15 · ಕನ್ನಡ ಬೈಬಲ್

ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್‌ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.

Cross references

ನಿರ್ಗಮಕಾಂಡ 17:4

ಆಗ ಮೋಶೆಯು ಕರ್ತನಿಗೆ ಮೊರೆಯಿಟ್ಟು--ಈ ಜನರಿಗೆ ನಾನೇನು ಮಾಡಲಿ? ಅವರು ಬಹಳ ಮಟ್ಟಿಗೆ ನನ್ನನ್ನು ಕಲ್ಲೆಸೆಯುವದಕ್ಕಿದ್ದಾರೆ ಅಂದನು.

ಯೆಹೋಶುವ 7:10

ಆಗ ಕರ್ತನು ಯೆಹೋಶುವನಿಗೆ--ನೀನು ಎದ್ದೇಳು; ನೀನು ಈ ಪ್ರಕಾರ ಬೋರಲು ಬಿದ್ದಿರುವ ದೇನು?

2 ಅರಸುಗಳು 20:11

ಆಗ ಪ್ರವಾದಿಯಾದ ಯೆಶಾಯನು ಕರ್ತನಿಗೆ ಮೊರೆಯಿಟ್ಟದ್ದರಿಂದ ಅವನು ಆಹಾಜನ ಛಾಯಾಸ್ತಂಭದಲ್ಲಿ ಇಳಿದುಹೋದ ನೆರ ಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡಿದನು.

ಎಜ್ರಾ 10:4

ನೀನು ಏಳು; ಯಾಕಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ಇರುವೆವು; ಧೈರ್ಯದಿಂದಿರು, ಅದನ್ನು ಮಾಡು ಅಂದರು.

ನೆಹೆಮ್ಯ 9:9

ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ.

Interlinear

Choose Theme