ಆತನು ತನ್ನ ಕೋಲನ್ನು ನನ್ನ ಮೇಲಿನಿಂದ ತೊಲ ಗಿಸಲಿ, ಆತನ ಭೀತಿ ನನ್ನನ್ನು ಹೆದರಿಸದಿರಲಿ.ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
Cross references
ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ.
ಆದದರಿಂದ ಆತನ ಮುಂದೆ ತಲ್ಲಣಪಡುತ್ತೇನೆ; ಗ್ರಹಿಸಿಕೊಂಡು ಆತನಿಗೆ ಭಯ ಪಡುತ್ತೇನೆ.
ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು.
ದೇವರಿಂದ ಬರುವ ನಾಶವು ನನಗೆ ಹೆದರಿಕೆಯಾಗಿತ್ತು; ಆತನ ಉನ್ನತ ಕ್ಕೋಸ್ಕರ ನಾನು ತಾಳಲಾರದೆ ಇದ್ದೆನು.
ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
ಇದಕ್ಕೋಸ್ಕರ ನನ್ನ ಹೃದಯವು ನಡುಗಿ ತನ್ನ ಸ್ಥಳದಿಂದ ಕದಲುತ್ತದೆ.
ನನ್ನಿಂದ ನಿನ್ನ ಪೆಟ್ಟನ್ನು ತೊಲಗಿಸು; ನಿನ್ನ ಕೈಹೊಡೆ ತದಿಂದ ನಾನು ಸತ್ತು ಹೋಗುತ್ತೇನೆ.
ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.
ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.