Home Bibles ಕೀರ್ತನೆಗಳು 68:2 · ಕನ್ನಡ ಬೈಬಲ್
ಕೀರ್ತನೆಗಳು 68:2 · ಕನ್ನಡ ಬೈಬಲ್

ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.

Cross references

ಅಂಕೆಗಳ ಪುಸ್ತಕ 10:35

ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು.ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು.

2 ಸಮುವೇಲ 10:13

ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡುವದಕ್ಕೆ ಸವಿಾಪಕ್ಕೆ ಬಂದರು. ಅವರು ಅವನ ಎದುರಿನಿಂದ ಓಡಿಹೋದರು.

2 ಸಮುವೇಲ 10:18

ಆಗ ಅರಾಮ್ಯರು ಇಸ್ರಾಯೇಲ್ಯರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ಮಂದಿ ಸಾರಥಿಗಳನ್ನೂ ನಾಲ್ವತ್ತು ಸಾವಿರ ಕುದುರೆ ರಾಹುತ ರನ್ನೂ ಕೊಂದು ಅವರ ಸೈನ್ಯದ ಯಜಮಾನನಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಸತ್ತನು.ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.

ಕೀರ್ತನೆಗಳು 22:14

ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.

ಕೀರ್ತನೆಗಳು 37:20

ದುಷ್ಟರು ನಾಶವಾಗುವರು; ಕರ್ತನ ಶತ್ರುಗಳು ಕುರಿಮರಿಗಳ ಕೊಬ್ಬಿನ ಹಾಗೆ ಇದ್ದು ಕರಗಿಹೋಗು ವರು; ಹೊಗೆಯಲ್ಲಿ ಕರಗಿಹೋಗುವರು.

ಕೀರ್ತನೆಗಳು 76:7

ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?

ಕೀರ್ತನೆಗಳು 80:16

ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.

ಕೀರ್ತನೆಗಳು 97:5

ಕರ್ತನ ಸನ್ನಿಧಿಯಲ್ಲಿ ಸಮಸ್ತ ಭೂಮಿಯು ಕರ್ತನ ಮುಂದೆ ಬೆಟ್ಟಗಳು ಮೇಣದ ಹಾಗೆ ಕರಗುತ್ತವೆ.

ಯೆಶಾಯ 9:18

ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.

ಯೆಶಾಯ 33:3

ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.

ಯೆಶಾಯ 64:2

ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!

ಹೊಶೇಯ 13:3

ಆದದರಿಂದ ಅವರು ಪ್ರಾತಃ ಕಾಲದ ಮೇಘದ ಹಾಗೆಯೂ ಬೇಗನೆ ಮಾಯ ವಾಗುವ ಇಬ್ಬನಿ ಹಾಗೆಯೂ ಸುಳಿಗಾಳಿಯು ನೆಲದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ ಚಿಮಿಣಿಗೆಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.

ಮೀಕ 1:4

ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.

ನಹೂಮ 1:5

ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.

2 ತೆಸಲೋನಿಕದವರಿಗೆ 1:8

ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ;

ಪ್ರಕಟನೆ 6:16

ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.

Interlinear

Choose Theme