ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು.ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು.
Cross references
ತನ್ನನ್ನು ಹಗೆ ಮಾಡುವವರಿಗೆ ಮುಖಾಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸಿ ಅವರನ್ನು ನಾಶಮಾಡುತ್ತಾನೆ; ಆತನು ತನ್ನನ್ನು ಹಗೆಮಾಡುವವರಿಗೆ ತಡಮಾಡದೆ ಮುಖಾ ಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ ಎಂದು ತಿಳಿದುಕೋ.
ನಾನು ಮಿಂಚುವ ಕತ್ತಿಯನ್ನು ಹದಮಾಡುವಾಗ, ನನ್ನ ಕೈ ನ್ಯಾಯವನ್ನು ಹಿಡುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ ನನ್ನನ್ನು ಹಗೆಮಾಡುವವರಿಗೆ ಮುಯ್ಯಿ ತೀರಿಸುವೆನು.
ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು--ಈ ಹೊತ್ತು ಕರ್ತನು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿ ದ್ದೇನು? ಕರ್ತನ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ ನಾವು ಅದನ್ನು ಶೀಲೋವಿನಿಂದ ತರಿಸೋಣ ಅಂದರು.
ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.
ದೇವರು ಎದ್ದೇಳುವಾಗ, ಆತನನ್ನು ಹಗೆ ಮಾಡುವವರು ಚದುರಿಸಲ್ಪಡಲಿ; ಆತ ನನ್ನು ವಿರೋಧಿಸುವವರು ಆತನ ಸಮ್ಮುಖದಿಂದ ಓಡಿ ಹೋಗುತ್ತಾರೆ.
ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.
ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧ ವಾಗಿ ಏಳುವವನ್ಯಾರು? ಇಲ್ಲವೆ ಅಪರಾಧ ಮಾಡು ವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನಾರು?
ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.
ಸಮುದ್ರವು ಭೋರ್ಗರೆಯುವಂತೆ ಭೋರ್ಗರೆ ಯುವ ಬಹು ಜನಗಳ ಸಮೂಹಕ್ಕೆ ಅಯ್ಯೋ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಾಂಗಗಳಿಗೆ ಅಯ್ಯೋ!
ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?