Home Bibles ☰ Books ನಹೂಮ 1:5 · ಕನ್ನಡ ಬೈಬಲ್
ನಹೂಮ 1:5 · ಕನ್ನಡ ಬೈಬಲ್

ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.

Cross references

ನಿರ್ಗಮಕಾಂಡ 19:18

ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.

ನ್ಯಾಯಾಧಿಪತಿಗಳು 5:5

ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.

2 ಸಮುವೇಲ 22:8

ಆಗ ಭೂಮಿಯು ಕದಲಿ ಕಂಪಿಸಿತು; ಆಕಾಶದ ಅಸ್ತಿವಾರಗಳು ನಡುಗಿ ಕದಲಿದವು; ಯಾಕಂದರೆ ಆತನು ಕೋಪ ಗೊಂಡನು.

ಯೋಬ 9:5

ಪರ್ವತಗಳನ್ನು ಅವು ಗಳಿಗೆ ತಿಳಿಯದ ಹಾಗೆ ನೂಕುತ್ತಾನೆ; ತನ್ನ ಸಿಟ್ಟಿನಲ್ಲಿ ಅವುಗಳನ್ನು ತಿರುಗಿಸುತ್ತಾನೆ.

ಯೋಬ 26:11

ಆಕಾಶದ ಸ್ತಂಭಗಳು ಅಲ್ಲಾಡು ತ್ತವೆ; ಆತನ ಗದರಿಕೆಗೆ ಆಶ್ಚರ್ಯಪಡುತ್ತವೆ.

ಕೀರ್ತನೆಗಳು 18:8

ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು.

ಕೀರ್ತನೆಗಳು 29:5

ಕರ್ತನ ಸ್ವರವು ದೇವ ದಾರುಗಳನ್ನು ಮುರಿಯುತ್ತದೆ; ಹೌದು, ಕರ್ತನು ಲೆಬನೋನಿನ ದೇವದಾರುಗಳನ್ನು ಮುರಿಯುತ್ತಾನೆ.

ಕೀರ್ತನೆಗಳು 46:6

ಅನ್ಯ ಜನಾಂಗವು ಘೋಷಿಸಿತು, ರಾಜ್ಯಗಳು ಕದಲಿದವು; ಆತನು ತನ್ನ ಧ್ವನಿಯನ್ನೆತ್ತಿ ಕೂಗಿದಾಗ ಭೂಮಿಯು ಕರಗಿತು.

ಕೀರ್ತನೆಗಳು 68:8

ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.

ಕೀರ್ತನೆಗಳು 97:4

ಆತನ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ನೋಡಿ, ನಡುಗುತ್ತದೆ.

ಕೀರ್ತನೆಗಳು 98:7

ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ.

ಕೀರ್ತನೆಗಳು 104:32

ಆತನು ಭೂಮಿಯನ್ನು ದೃಷ್ಟಿಸಲು ಅದು ನಡು ಗುತ್ತದೆ; ಬೆಟ್ಟಗಳನ್ನು ಮುಟ್ಟಲು ಅವು ಹೊಗೆ ಹಾಯುತ್ತವೆ.

Interlinear

Choose Theme