ಓ ಸಭೆಯೇ, ನೀವು ನಿಜವಾಗಿ ನೀತಿಯನ್ನು ನುಡಿಯುವಿರೋ? ಓ ಮನುಷ್ಯರ ಮಕ್ಕಳೇ, ನೀವು ಯಥಾರ್ಥವಾಗಿ ನ್ಯಾಯತೀರಿಸು ವಿರೋ?
Cross references
ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು.
ಇಸ್ರಾಯೇಲಿನ ದೇವರು ಹೇಳಿದ್ದು; ಇಸ್ರಾಯೇಲಿನ ಬಂಡೆ ನನ್ನ ಸಂಗಡ ಮಾತನಾಡಿದ್ದು--ಮನುಷ್ಯರ ಮೇಲೆ ಆಳುವ ವನು ನೀತಿವಂತನಾಗಿರತಕ್ಕದ್ದು; ಅವನು ದೇವರ ಭಯ ದಲ್ಲಿ ಆಳುವನು.
ನ್ಯಾಯಾಧಿಪತಿಗಳಿಗೆ -- ನೀವು ಮಾಡುವದನ್ನು ನೋಡಿಕೊಳ್ಳಿರಿ; ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಕರ್ತನಿಗೋಸ್ಕರ ನ್ಯಾಯತೀರಿಸುತ್ತೀರಿ.
ನನ್ನ ಮೇಲೆ ಕರುಣೆಯಿಡು, ಓ ದೇವರೇ, ನನ್ನನ್ನು ಕರುಣಿಸು; ನನ್ನ ಪ್ರಾಣವು ನಿನ್ನನ್ನು ಆಶ್ರಯಿಸಿಕೊಳ್ಳುತ್ತದೆ. ಆಪತ್ತುಗಳು ದಾಟುವ ವರೆಗೂ ನಿನ್ನ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
ಓ ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸು.
ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು.
ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ.
ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು.
ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು;
ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯ ದಿಂದ ದೊರೆತನಮಾಡುವರು.
ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈ ಒಳ್ಳೇ ಅಂಜೂರದ ಹಣ್ಣುಗಳ ಹಾಗೆ ನಾನು ಈ ಸ್ಥಳದಿಂದ ಕಸ್ದೀಯರ ದೇಶಕ್ಕೆ ಒಳ್ಳೇದಕ್ಕಾಗಿ ಕಳುಹಿಸಿದ ಯೆಹೂದದ ಸೆರೆಯವರನ್ನು ಪರಾಮರಿ ಸುವೆನು.
ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
ಆಗ ಇಗೋ, ಅಲ್ಲಿ ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಆಲೋಚನಾ ಸಭೆಯವನೂ ಒಳ್ಳೆಯವನೂ ನೀತಿವಂತನೂ ಆಗಿ ದ್ದನು.
ಅವರು ಅದನ್ನು ಕೇಳಿದವರಾಗಿ ಬೆಳಗಿನ ಜಾವದಲ್ಲಿಯೇ ದೇವಾಲಯದೊಳಕ್ಕೆ ಪ್ರವೇಶಿಸಿ ಬೋಧಿಸಿದರು. ಇತ್ತ ಮಹಾಯಾಜಕನೂ ಅವನ ಕೂಡ ಇದ್ದವರೂ ಬಂದು ಆಲೋಚನಾ ಸಭೆಯನ್ನೂ ಇಸ್ರಾಯೇಲ್ ಮಕ್ಕಳ ಶಾಸನ ಸಭೆಯನ್ನೂ ಕೂಡಿಸಿ ಅಪೊಸ್ತಲರನ್ನು ಕರತರುವದಕ್ಕಾಗಿ ಸೆರೆ ಮನೆಗೆ ಕಳುಹಿಸಿದರು