ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
Cross references
ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು ಬಾಗಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ ಅವನ ಯಜಮಾ ನನು ಅವನ ಕಿವಿಯನ್ನು ಸಲಾಕಿಯಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ಸೇವೆಮಾಡಬೇಕು.
ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿ ಯಾದ ಸ್ತ್ರೀಗೆ ಏಟು ತಗಲಿದದರಿಂದ ಅವಳಿಗೆ ಗರ್ಭ ಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಸ್ತ್ರೀಯ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡು ತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.
ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ.
ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು.
ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು;
ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.
ನಿನ್ನ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ ಆ ಹತವಾದವನ ಸುತ್ತಲಿರುವ ಪಟ್ಟಣಗಳ ವರೆಗೂ ಅಳತೆಮಾಡಬೇಕು.
ಜನರಲ್ಲಿ ಏನಾದರೂ ವಿರೋಧವಿದ್ದರೆ ಅವರು ನ್ಯಾಯತೀರ್ವಿಕೆ ಹೊಂದುವ ಹಾಗೆ ನ್ಯಾಯಾಧಿಪತಿಗಳ ಬಳಿಗೆ ನ್ಯಾಯಕ್ಕೆ ಬಂದರೆ ನೀತಿವಂತನನ್ನು ನೀತಿವಂತನೆಂದೂ ದುಷ್ಟನನ್ನು ಅಪರಾಧಿಯೆಂದೂ ನ್ಯಾಯತೀರಿಸಬೇಕು.
ಸಮುವೇಲನು ವೃದ್ಧನಾದಾಗ ಆಗಿದ್ದೇನಂದರೆ ತನ್ನ ಕುಮಾರರನ್ನು ಇಸ್ರಾ ಯೇಲಿಗೆ ನ್ಯಾಯಾಧಿಪತಿಗಳಾಗಿರುವದಕ್ಕೆ ಇಟ್ಟನು.
ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.
ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು.
ಪಟ್ಟಣ ದಿಂದ ಪಟ್ಟಣಕ್ಕೆ ದೇಶದ ಕೋಟೆಯ ಪಟ್ಟಣಗಳ ಲ್ಲೆಲ್ಲಾ ಅವನು ನ್ಯಾಯಾಧಿಪತಿಗಳನ್ನು ನೇಮಿಸಿದನು.
ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ.
ಪ್ರತಿಯೊಬ್ಬನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವ ರಿಂದ ನೇಮಿಸಲ್ಪಟ್ಟವರು.