Home Bibles ಕೀರ್ತನೆಗಳು 32:6 · ಕನ್ನಡ ಬೈಬಲ್
ಕೀರ್ತನೆಗಳು 32:6 · ಕನ್ನಡ ಬೈಬಲ್

ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.

Cross references

ಆದಿಕಾಂಡ 7:17

ನಾಲ್ವತ್ತು ದಿನ ಭೂಮಿಯ ಮೇಲೆ ಪ್ರಳಯವು ಇತ್ತು; ಆಗ ನೀರುಗಳು ಹೆಚ್ಚಿ ನಾವೆಯನ್ನು ಎತ್ತಲು ಅದು ಭೂಮಿಯಿಂದ ಎತ್ತಲ್ಪಟ್ಟಿತು.

ಕೀರ್ತನೆಗಳು 4:3

ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ. ನಾನು ಕರ್ತನನ್ನು ಮೊರೆಯಿಡಲು ಆತನು ಕೇಳುವನು.

ಕೀರ್ತನೆಗಳು 34:2

ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.

ಕೀರ್ತನೆಗಳು 40:3

ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.

ಕೀರ್ತನೆಗಳು 42:7

ನಿನ್ನ ನೀರಿನ ಪ್ರವಾಹದ ಶಬ್ದದಿಂದ ಅಗಾಧವು ಅಗಾಧಕ್ಕೆ ಕೂಗು ತ್ತದೆ; ನಿನ್ನ ಅಲೆಗಳೂ ತೆರೆಗಳೂ ಎಲ್ಲಾ ನನ್ನ ಮೇಲೆ ಹಾದುಹೋಗಿವೆ.

ಕೀರ್ತನೆಗಳು 51:12

ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.

ಕೀರ್ತನೆಗಳು 69:1

ಓ ದೇವರೇ ನನ್ನನ್ನು ರಕ್ಷಿಸು; ನೀರು ನನ್ನ ಪ್ರಾಣದ ವರೆಗೂ ಬಂದಿದೆ.

ಕೀರ್ತನೆಗಳು 69:13

ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು.

ಕೀರ್ತನೆಗಳು 91:7

ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ.

ಕೀರ್ತನೆಗಳು 124:4

ಆಗ ನೀರುಗಳು ನಮ್ಮನ್ನು ಮುಣುಗಿಸುತ್ತಿದ್ದವು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.

ಕೀರ್ತನೆಗಳು 144:7

ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.

ಸಾಮೇತಿಗಳು 1:28

ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ.

ಯೆಶಾಯ 43:2

ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.

ಯೆಶಾಯ 49:8

ಕರ್ತನು ಹೀಗ ನ್ನುತ್ತಾನೆ--ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರ ವನ್ನು ದಯಪಾಲಿಸಿದ್ದೇನೆ; ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ, ನಾನು ನಿನ್ನನ್ನು ಕಾಪಾಡಿ ಭೂಮಿಯನ್ನು ಸ್ಥಾಪಿಸುವದಕ್ಕೂ ಹಾಳಾಗಿರುವ ಸ್ವಾಸ್ತ್ಯ ಗಳನ್ನು ಬಾಧ್ಯವಾಗಿ ಹೊಂದುವಂತೆಯೂ ಜನರ ಒಡಂಬಡಿಕೆಗಾಗಿ ನಿನಗೆ ಕೊಡುವೆನು.

ಯೆಶಾಯ 55:6

ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.

ಮತ್ತಾಯ 7:24

ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.

ಲೂಕ 19:42

ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.

ಯೋಹಾನ 7:34

ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ ಅಂದನು.

2 ಕೊರಿಂಥದವರಿಗೆ 1:4

ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ.

2 ಕೊರಿಂಥದವರಿಗೆ 6:2

(ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).

2 ಕೊರಿಂಥದವರಿಗೆ 7:9

ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

1 ತಿಮೋಥೆಯ 1:16

ಹೇಗಿದ್ದರೂ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಿರಬೇಕೆಂದು ಯೇಸು ಕ್ರಿಸ್ತನು ಮೊದಲು ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘ ಶಾಂತಿಯನ್ನು ತೋರ್ಪಡಿಸಿದನು.

ತೀತ 2:12

ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.

ಪ್ರಕಟನೆ 12:15

ಆ ಸ್ತ್ರೀಯನ್ನು ಪ್ರವಾಹವು ಬಡಕೊಂಡು ಹೋಗ ಬೇಕೆಂದು ಆಕೆಯ ಹಿಂದೆ ಸರ್ಪವು ತನ್ನ ಬಾಯೊಳಗಿಂದ ನೀರನ್ನು ಪ್ರವಾಹದಂತೆ ಬಿಟ್ಟಿತು.

Interlinear

Choose Theme