Home Bibles 2 ಕೊರಿಂಥದವರಿಗೆ 6:2 · ಕನ್ನಡ ಬೈಬಲ್
2 ಕೊರಿಂಥದವರಿಗೆ 6:2 · ಕನ್ನಡ ಬೈಬಲ್

(ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).

Cross references

ಯೆಶಾಯ 49:8

ಕರ್ತನು ಹೀಗ ನ್ನುತ್ತಾನೆ--ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರ ವನ್ನು ದಯಪಾಲಿಸಿದ್ದೇನೆ; ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ, ನಾನು ನಿನ್ನನ್ನು ಕಾಪಾಡಿ ಭೂಮಿಯನ್ನು ಸ್ಥಾಪಿಸುವದಕ್ಕೂ ಹಾಳಾಗಿರುವ ಸ್ವಾಸ್ತ್ಯ ಗಳನ್ನು ಬಾಧ್ಯವಾಗಿ ಹೊಂದುವಂತೆಯೂ ಜನರ ಒಡಂಬಡಿಕೆಗಾಗಿ ನಿನಗೆ ಕೊಡುವೆನು.

ಯೆಶಾಯ 61:2

ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ

ಯೆಹೆಜ್ಕೇಲ 16:8

ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ.

ಲೂಕ 4:19

ಕರ್ತನ ಅಂಗೀಕೃತವಾದ ವರುಷವನ್ನು ಸಾರುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ ಎಂದು ಬರೆದಿರುವದನ್ನು ಕಂಡು ಓದಿದನು.

ಲೂಕ 18:37

ನಜರೇತಿನವನಾದ ಯೇಸು ಹಾದು ಹೋಗುತ್ತಿದ್ದಾ ನೆಂದು ಅವರು ಅವನಿಗೆ ಹೇಳಿದರು.

ಲೂಕ 19:42

ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.

ಹೆಬ್ರಿಯರಿಗೆ 3:7

ಆದದರಿಂದ(ಪವಿತ್ರಾತ್ಮನು ಹೇಳುವ ಪ್ರಕಾರ--ನೀವು ಈ ದಿನ ದೇವರ ಶಬ್ದಕ್ಕೆ ಕಿವಿಗೊಟ್ಟರೆ

ಹೆಬ್ರಿಯರಿಗೆ 3:13

ನಿಮ್ಮಲ್ಲಿ ಒಬ್ಬ ರಾದರೂ ಪಾಪದಿಂದ ಮೋಸಹೋಗಿ ಕಠಿಣರಾಗ ದಂತೆ--ಈ ದಿನ ಎಂದು ಕರೆಯಲ್ಪಡುವಾಗಲೇ ಪ್ರತಿ ನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.

ಹೆಬ್ರಿಯರಿಗೆ 4:7

ತಿರಿಗಿ ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತನಾಡಿ--ಈ ಹೊತ್ತೇ ಎಂದು ಒಂದಾ ನೊಂದು ದಿವಸವನ್ನು ಗೊತ್ತುಮಾಡುತ್ತಾನೆ; ಹೇಗೆಂದರೆ--ನೀವು ಈ ಹೊತ್ತು ಆತನ ಧ್ವನಿಗೆ ಕಿವಿಗೊಟ್ಟರೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ ಎಂದು ಹೇಳುತ್ತಾನಷ್ಟೆ.

Interlinear

Choose Theme