Home Bibles 2 ಕೊರಿಂಥದವರಿಗೆ 7:9 · ಕನ್ನಡ ಬೈಬಲ್
2 ಕೊರಿಂಥದವರಿಗೆ 7:9 · ಕನ್ನಡ ಬೈಬಲ್

ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

Cross references

ಕೀರ್ತನೆಗಳು 38:18

ನನ್ನ ಅಕ್ರಮವನ್ನು ತಿಳಿಸುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.

ಸಭಾಪ್ರಸಂಗಿ 7:3

ನಗೆಗಿಂತ ದುಃಖವು ವಾಸಿ; ಹೃದಯದ ದುಃಖದ ಭಾವನೆಯಿಂದ ಹೃದಯವು ಗುಣವಾಗುತ್ತದೆ.

ಯೆಶಾಯ 6:9

ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು.

ಯೆರೆಮಿಯ 31:18

ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು.

ಜೆಕರ್ಯ 12:10

ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.

ಲೂಕ 15:7

ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಲೂಕ 15:10

ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಲೂಕ 15:17

ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.

ಲೂಕ 15:32

ಆದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋದ ವನಾಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಸಂತೋ ಷಿಸಿ ಆನಂದಪಡುವದು ಯುಕ್ತವಾದದ್ದೇ ಎಂದು ಹೇಳಿದನು ಅಂದನು.

ಅಪೋಸ್ತಲರ ಕೃತ್ಯಗಳು 20:21

ಯೆಹೂ ದ್ಯರೂ ಗ್ರೀಕರೂ ದೇವರ ಕಡೆಗೆ ಮಾನಸಾಂತರಪಟ್ಟು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೇಲೆ ನಂಬಿಕೆಯಿಡಬೇಕೆಂದು ಸಾಕ್ಷೀಕರಿಸುವವನಾಗಿದ್ದೆನು.

2 ಕೊರಿಂಥದವರಿಗೆ 1:12

ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.

2 ಕೊರಿಂಥದವರಿಗೆ 2:16

ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.

2 ಕೊರಿಂಥದವರಿಗೆ 7:6

ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.

2 ಕೊರಿಂಥದವರಿಗೆ 7:10

ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

2 ಕೊರಿಂಥದವರಿಗೆ 10:8

ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವದರಲ್ಲಿ ನಾನು ನಾಚಿಕಪಡುವದಿಲ್ಲ; ಆದರೆ ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಭಕ್ತವೃದ್ಧಿಗಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟನು.

2 ಕೊರಿಂಥದವರಿಗೆ 13:8

ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.

Interlinear

Choose Theme