Home Bibles ಕೀರ್ತನೆಗಳು 31:4 · ಕನ್ನಡ ಬೈಬಲ್
ಕೀರ್ತನೆಗಳು 31:4 · ಕನ್ನಡ ಬೈಬಲ್

ಅವರು ಗುಪ್ತವಾಗಿ ಒಡ್ಡಿದ ಬಲೆ ಯೊಳಗಿಂದ ನನ್ನನ್ನು ಹೊರಗೆ ಎಳೆ; ನೀನು ನನ್ನ ಬಲವಾಗಿದ್ದೀ.

Cross references

ಕೀರ್ತನೆಗಳು 18:3

ಸ್ತುತಿಸತಕ್ಕ ಕರ್ತನಿಗೆ ನಾನು ಮೊರೆಯಿಡುತ್ತೇನೆ; ಹೀಗೆ ನಾನು ನನ್ನ ಶತ್ರುಗಳೊಳಗಿಂದ ರಕ್ಷಿಸಲ್ಪಡುತ್ತೇನೆ.

ಕೀರ್ತನೆಗಳು 19:14

ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.

ಕೀರ್ತನೆಗಳು 23:3

ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.

ಕೀರ್ತನೆಗಳು 25:15

ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.

ಕೀರ್ತನೆಗಳು 35:7

ಕಾರಣವಿಲ್ಲದೆ ಅವರು ನನಗೋಸ್ಕರ ತಮ್ಮ ಬಲೆಯನ್ನು ಕುಣಿಯಲ್ಲಿ ಅಡಗಿಸಿಟ್ಟಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣಕೋಸ್ಕರ ಅದನ್ನು ಅಗೆದಿದ್ದಾರೆ.

ಕೀರ್ತನೆಗಳು 57:6

ಅವರು ನನ್ನ ಹೆಜ್ಜೆಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ; ನನ್ನ ಮುಂದೆ ಕುಣಿಯನ್ನು ಅಗೆದು ಅದರ ನಡುವೆ ತಾವೇ ಬಿದ್ದಿದ್ದಾರೆ. ಸೆಲಾ.

ಕೀರ್ತನೆಗಳು 124:7

ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.

ಕೀರ್ತನೆಗಳು 140:5

ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.

ಸಾಮೇತಿಗಳು 29:5

ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ.

2 ಕೊರಿಂಥದವರಿಗೆ 12:9

ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.

2 ತಿಮೋಥೆಯ 2:26

ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.

Interlinear

Choose Theme