Home Bibles ಸಾಮೇತಿಗಳು 29:5 · ಕನ್ನಡ ಬೈಬಲ್
ಸಾಮೇತಿಗಳು 29:5 · ಕನ್ನಡ ಬೈಬಲ್

ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ.

Cross references

1 ಸಮುವೇಲ 18:23

ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು--ನಾನು ದರಿದ್ರನೂ ಅಲ್ಪನಾಗಿ ಎಣಿಸಲ್ಪ ಟ್ಟವನೂ ಆಗಿರುವಾಗ ನಾನು ಅರಸನಿಗೆ ಅಳಿಯ ನಾಗುವದು ನಿಮ್ಮ ಕಣ್ಣುಗಳಿಗೆ ಅಲ್ಪವಾಗಿ ಕಾಣು ತ್ತದೆಯೋ ಅಂದನು.

2 ಸಮುವೇಲ 14:17

ಆಗ ನಿನ್ನ ದಾಸಿಯು--ಅರಸ ನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ; ಒಳ್ಳೇದನ್ನೂ ಕೆಟ್ಟದ್ದನ್ನೂ ವಿವೇಚಿಸುವ ಹಾಗೆ ಅರಸ ನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ; ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಅಂದಳು.

ಯೋಬ 17:5

ತನ್ನ ಸ್ನೇಹಿತರನ್ನು ಹೊಗಳಿ ಮಾತನಾಡುವವನ ಮಕ್ಕಳ ಕಣ್ಣುಗಳು ಕ್ಷೀಣವಾಗುವವು.

ಕೀರ್ತನೆಗಳು 5:9

ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ.

ಕೀರ್ತನೆಗಳು 12:2

ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.

ಸಾಮೇತಿಗಳು 1:17

ನಿಶ್ಚಯವಾಗಿ ಪಕ್ಷಿಯ ಕಣ್ಣೆದುರಿಗೆ ಬಲೆಯನ್ನು ಹರಡುವದು ವ್ಯರ್ಥವೇ.

ಸಾಮೇತಿಗಳು 7:5

ಪರಸ್ತ್ರೀಯಿಂದಲೂ ತನ್ನ ಮಾತು ಗಳಿಂದ ಮುಖಸ್ತುತಿ ಮಾಡುವ ಅನ್ಯಳಿಂದಲೂ ಅವು ನಿನ್ನನ್ನು ಕಾಪಾಡುವವು.

ಸಾಮೇತಿಗಳು 7:21

ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು.

ಸಾಮೇತಿಗಳು 20:19

ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.

ಸಾಮೇತಿಗಳು 26:24

ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ.

ಸಾಮೇತಿಗಳು 26:28

ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.

ವಿಲಾಪಗಳು 1:13

ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.

ಹೊಶೇಯ 5:1

ಓ ಯಾಜಕರೇ, ಇದನ್ನು ನೀವು ಕೇಳಿರಿ, ಇಸ್ರಾಯೇಲಿನ ಮನೆತನದವರೇ, ನೀವು ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ, ನೀವು ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.

ಲೂಕ 20:20

ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು.

ರೋಮಾಪುರದವರಿಗೆ 16:18

ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.

1 ತೆಸಲೋನಿಕದವರಿಗೆ 2:5

ನಿಮಗೆ ತಿಳಿದಿ ರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಯನ್ನು ಮಾಡುವವರಾಗಿ ಕಾಣಬಂದಿಲ್ಲ. ದ್ರವ್ಯಾಶೆಯನ್ನು ಮರೆಮಾಡುವದಕ್ಕಾಗಿ ವೇಷವನ್ನು ಹಾಕಿಕೊಂಡವ ರಾಗಿಲ್ಲ; ಇದಕ್ಕೆ ದೇವರೇ ಸಾಕ್ಷಿ.

Interlinear

Choose Theme