Home Bibles ಕೀರ್ತನೆಗಳು 25:15 · ಕನ್ನಡ ಬೈಬಲ್
ಕೀರ್ತನೆಗಳು 25:15 · ಕನ್ನಡ ಬೈಬಲ್

ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.

Cross references

1 ಅರಸುಗಳು 1:20

ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ. ಆದದರಿಂದ ಅರಸನಾದ ನನ್ನ ಒಡೆಯನೇ, ನಿನ್ನ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನಾ ರೆಂದು ನೀನು ಹೇಳುವ ಹಾಗೆ ಸಮಸ್ತ ಇಸ್ರಾಯೇಲ್ಯರ ಕಣ್ಣುಗಳು ನಿನ್ನ ಮೇಲೆ ಇರುತ್ತವೆ.

2 ದಿನವೃತ್ತಾಂತ 20:12

ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು.

ಕೀರ್ತನೆಗಳು 31:4

ಅವರು ಗುಪ್ತವಾಗಿ ಒಡ್ಡಿದ ಬಲೆ ಯೊಳಗಿಂದ ನನ್ನನ್ನು ಹೊರಗೆ ಎಳೆ; ನೀನು ನನ್ನ ಬಲವಾಗಿದ್ದೀ.

ಕೀರ್ತನೆಗಳು 121:1

ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?

ಕೀರ್ತನೆಗಳು 123:2

ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನೂ ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರವೇ, ನಮ್ಮ ದೇವರಾದ ಕರ್ತನು ನಮ್ಮನ್ನು ಕರುಣಿಸುವ ವರೆಗೆ ಆತನನ್ನೇ ನಿರೀಕ್ಷಿಸುತ್ತವೆ.

ಕೀರ್ತನೆಗಳು 124:7

ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.

ಕೀರ್ತನೆಗಳು 141:8

ಕರ್ತನಾದ ಓ ದೇವರೇ, ನನ್ನ ಕಣ್ಣುಗಳು ನಿನ್ನ ಕಡೆಗೆ ಅವೆ; ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ; ನನ್ನ ಪ್ರಾಣವನ್ನು ದಿಕ್ಕಿಲ್ಲ ದಂತೆ ಬಿಡಬೇಡ.

ಯೆರೆಮಿಯ 5:26

ನನ್ನ ಜನರ ಕುಮಾರಿಯೇ, ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು; ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ ಬಹುಕಠಿಣವಾದ ಗೋಳಾಟವನ್ನು ಮಾಡು; ಸೂರೆ ಮಾಡುವವನು ಫಕ್ಕನೆ ನಮ್ಮ ಮೇಲೆ ಬರುವನು.

2 ತಿಮೋಥೆಯ 2:25

ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.

Interlinear

Choose Theme