Home Bibles ಹೊಶೇಯ 2:16 · ಕನ್ನಡ ಬೈಬಲ್
ಹೊಶೇಯ 2:16 · ಕನ್ನಡ ಬೈಬಲ್

ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನೀನು ನನ್ನನ್ನು ಇನ್ನು ಮೇಲೆ ಬಾಳಿ ಎಂದು ಕರೆಯದೆ ಈಶೀ ಎಂದು ಕರೆಯುವಿ.

Cross references

ಆದಿಕಾಂಡ 34:3

ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು.

ನ್ಯಾಯಾಧಿಪತಿಗಳು 19:3

ಆಗ ಅವಳ ಗಂಡನು ಎದ್ದು ಅವಳ ಸಂಗಡ ಪ್ರೀತಿಯಲ್ಲಿ ಮಾತನಾಡಿ ಅವಳನ್ನು ತಿರಿಗಿ ಕರತರುವದಕ್ಕೆ ತನ್ನ ಊಳಿಗದವನನ್ನೂ ಎರಡು ಕತ್ತೆಗಳನ್ನೂ ತಕ್ಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರಕೊಂಡು ಹೋದಳು. ಹೆಂಗಸಿನ ತಂದೆ ಅವನನ್ನು ಕಂಡಾಗ ಅವನನ್ನು ಕಂಡುಕೊಂಡ ದ್ದರಿಂದ ಸಂತೋಷಪಟ್ಟನು.

ರೂತ 2:13

ಅದಕ್ಕೆ ಅವಳು ನನ್ನ ಒಡೆಯನೇ, ನನಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಯಾಕಂದರೆ ನನ್ನನ್ನು ನೀನು ಆದರಿಸಿದಿ; ನಾನು ನಿನ್ನ ದಾಸಿಗಳಲ್ಲಿ ಒಬ್ಬಳಲ್ಲ ದಿದ್ದರೂ ನನ್ನ ಕೂಡ ಸ್ನೇಹದಿಂದ ಮಾತನಾಡಿದಿಅಂದಳು.

ಯೆಶಾಯ 40:2

ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.

ಯೆಶಾಯ 54:5

ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.

ಯೆರೆಮಿಯ 3:14

ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.

ಯೆಹೆಜ್ಕೇಲ 20:35

ನಿಮ್ಮನ್ನು ಜನಗಳಿರುವ ಅರಣ್ಯದೊಳಗೆ ತಂದು ನಾನು ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ವಾದಿಸುವೆನು.

ಹೊಶೇಯ 2:7

ಅವಳು ತನ್ನ ಮಿಂಡರನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವದಿಲ್ಲ, ಹುಡುಕಿದರೂ ಅವರು ಸಿಕ್ಕುವದಿಲ್ಲ; ಆಗ ಅವಳು--ನನ್ನ ಮೊದಲನೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು; ಈಗಿರುವದಕ್ಕಿಂತ ಆಗ ನನಗೆ ಎಷ್ಟೋ ಚೆನ್ನಾಗಿತ್ತು ಎಂದು ಅಂದುಕೊಳ್ಳುವಳು.

ಯೋಹಾನ 3:29

ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೆ ಮದಲಿಂಗನ ಸ್ನೇಹಿತನು ನಿಂತುಕೊಂಡು ಆತನ ಮಾತನ್ನು ಕೇಳಿ ಮದಲಿಂಗನ ಧ್ವನಿಗೆ ಬಹಳವಾಗಿ ಸಂತೋಷ ಪಡುತ್ತಾನೆ; ಆದಕಾರಣ ಈ ನನ್ನ ಸಂತೋಷವು ನೆರವೇರಿತು.

2 ಕೊರಿಂಥದವರಿಗೆ 11:2

ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.

ಎಫೆಸದವರಿಗೆ 5:25

ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.

ಪ್ರಕಟನೆ 19:7

ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.

Interlinear

Choose Theme