Home Bibles ಕೀರ್ತನೆಗಳು 150:3 · ಕನ್ನಡ ಬೈಬಲ್
ಕೀರ್ತನೆಗಳು 150:3 · ಕನ್ನಡ ಬೈಬಲ್

ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ.

Cross references

ಅಂಕೆಗಳ ಪುಸ್ತಕ 10:10

ನಿಮ್ಮ ಸಂತೋಷದ ದಿವಸದಲ್ಲಿಯೂ ಹಬ್ಬಗಳ ಲ್ಲಿಯೂ ತಿಂಗಳಿನ ಆರಂಭದಲ್ಲಿಯೂ ನಿಮ್ಮ ದಹನ ಬಲಿಗಳನ್ನು ನಿಮ್ಮ ಸಮಾಧಾನದ ಬಲಿಗಳನ್ನು ಅರ್ಪಿಸು ವಾಗ ಅವುಗಳನ್ನು ಊದಬೇಕು. ಅವು ನಿಮಗೆ ನಿಮ್ಮ ದೇವರ ಎದುರಿನಲ್ಲಿ ಜ್ಞಾಪಕವಾಗಿರುವವು. ನಿಮ್ಮ ದೇವರಾಗಿರುವ ಕರ್ತನು ನಾನೇ.

2 ಸಮುವೇಲ 6:5

ದಾವೀದನೂ ಇಸ್ರಾಯೇಲ್‌ ಮನೆ ಯವರೆಲ್ಲರೂ ತುರಾಯಿ ಮರದಿಂದ ಮಾಡಲ್ಪಟ್ಟ ಸಕಲ ವಾದ್ಯಗಳಾದ ಕಿನ್ನರಿಗಳನ್ನೂ ವೀಣೆಗಳನ್ನೂ ದಮ್ಮಡಿಗಳನ್ನೂ ಸ್ವರಮಂಡಲಗಳನ್ನೂ ತಾಳಗಳನ್ನೂ ಕರ್ತನ ಮುಂದೆ ಬಾರಿಸಿಕೊಂಡು ಹೋದರು.

2 ಸಮುವೇಲ 6:15

ಈ ಪ್ರಕಾರ ದಾವೀದನೂ ಇಸ್ರಾಯೇಲ್‌ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು.

1 ದಿನವೃತ್ತಾಂತ 15:20

ಜೆಕರ್ಯನೂ ಅಜೀಯೇಲನೂ ಶೆವಿಾರಾಮೋತನೂ ಯೆಹೀ ಯೇಲನೂ ಉನ್ನಿಯೂ ಎಲೀಯಾಬನೂ ಮಾಸೇ ಯನೂ ಬೆನಾಯನೂ ಅಲಮೋತಿನಿಂದ ವೀಣೆಗಳನ್ನು ಬಾರಿಸುವದಕ್ಕೂ;

1 ದಿನವೃತ್ತಾಂತ 15:24

ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್‌ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.

1 ದಿನವೃತ್ತಾಂತ 15:28

ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.

1 ದಿನವೃತ್ತಾಂತ 16:42

ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.

1 ದಿನವೃತ್ತಾಂತ 25:1

ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್‌ ಹೇಮಾನ್‌ ಯೆದುತೂನ್‌ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು.

2 ದಿನವೃತ್ತಾಂತ 5:13

ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು.ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.

2 ದಿನವೃತ್ತಾಂತ 20:28

ವೀಣೆಗ ಳಿಂದಲೂ ಕಿನ್ನರಿಗಳಿಂದಲೂ ತುತೂರಿಗಳಿಂದಲೂ ಯೆರೂಸಲೇಮಿನಲ್ಲಿ ಪ್ರವೇಶಿಸಿ ಕರ್ತನ ಆಲಯಕ್ಕೆ ಬಂದರು.

ಕೀರ್ತನೆಗಳು 33:2

ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ.

ಕೀರ್ತನೆಗಳು 81:2

ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ.

ಕೀರ್ತನೆಗಳು 92:3

ಹತ್ತು ತಂತಿ ವೀಣೆ ಯಿಂದಲೂ ವಾದ್ಯದಿಂದಲೂ ಕಿನ್ನರಿಯ ಘನ ಸ್ವರ ದಿಂದಲೂ ತಿಳಿಸುವದು ಒಳ್ಳೇದು.

ಕೀರ್ತನೆಗಳು 98:5

ಕರ್ತನಿಗೆ ಕಿನ್ನರಿಯಿಂದ, ಹೌದು, ಕಿನ್ನರಿ ಯಿಂದಲೂ ಕೀರ್ತನೆಯ ಸ್ವರದಿಂದಲೂ ಹಾಡಿರಿ.

ಕೀರ್ತನೆಗಳು 108:2

ವೀಣೆಯೇ, ಕಿನ್ನರಿಯೇ, ಎಚ್ಚರವಾಗು; ನಾನು ಉದಯದಲ್ಲಿ ಎಚ್ಚರಗೊಳ್ಳುವೆನು.

ಕೀರ್ತನೆಗಳು 149:3

ಆತನ ಹೆಸರನ್ನು ಕುಣಿಯುತ್ತಾ ಸ್ತುತಿಸಲಿ; ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಆತನನ್ನು ಕೀರ್ತಿಸಲಿ.

ದಾನಿಯೇಲ 3:5

ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.

Interlinear

Choose Theme