ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು.
Cross references
ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು.
ಅರಸನು ಅಲ್ಮುಗ್ ಮರಗಳಿಂದ ಕರ್ತನ ಮಂದಿರಕ್ಕೋಸ್ಕರವೂ ಅರಸನ ಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿ ದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ ವೀಣೆಗಳನ್ನೂ ಮಾಡಿಸಿದನು; ಅಂದಿ ನಿಂದ ಈ ದಿನದ ವರೆಗೂ ಅಂಥ ಅಲ್ಮುಗ್ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.
ಆದರೆ ಈಗ ವಾದ್ಯ ಬಾರಿಸುವವನನ್ನು ನನ್ನ ಬಳಿಗೆ ಕರಕೊಂಡು ಬಾ ಅಂದನು. ಆಗ ವಾದ್ಯ ಬಾರಿಸುವ ವನು ಬಾರಿಸಿದಾಗ ಕರ್ತನ ಕೈ ಅವನ ಮೇಲೆ ಬಂತು.
ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು.
ತಮ್ಮ ಮಕ್ಕಳ ಸಂಗಡ ಕಾಯುತ್ತಿದ್ದವರು ಯಾರಂದರೆ--ಕೆಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಇವನು ಯೋವೇಲನ ಮಗನು,
ಇವನ ಬಲಗಡೆ ನಿಂತಿರುವ ಇವನ ಸಹೋ ದರನಾದ ಆಸಾಫನು; ಈ ಆಸಾಫನು ಬೆರೆಕ್ಯನ ಮಗನು, ಇವನು ಶಿಮ್ಮನ ಮಗನು,
ಅವರ ಸಹೋದರರಾದ ಮೆರಾರೀ ಕುಮಾ ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಇವನು ಅಬ್ದೀಯ ಮಗನು,
ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ.
ಆಗ ದಾವೀದನೂ ಸಮಸ್ತ ಇಸ್ರಾ ಯೇಲ್ಯರೂ ತಮ್ಮ ಸಮಸ್ತ ಕಿನ್ನರಿ ವೀಣೆ ದಮ್ಮಡಿ ತಾಳ ತುತೂರಿಗಳಿಂದ ಬಲದಿಂದ ದೇವರ ಮುಂದೆ ಹಾಡುಗಳನ್ನೂ ಹಾಡಿದರು.
ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.
ಹಾಡುಗಾರರಾದ ಹೇಮಾನನೂ ಆಸಾಫನೂ ಏತಾನನೂ ತಾಮ್ರದ ತಾಳಗಳನ್ನು ಬಾರಿಸುವದಕ್ಕೂ
ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.
ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
ಅವರ ಸಂಗಡ ಆತನ ಕೃಪೆ ಯುಗಯುಗಕ್ಕಿರುವ ಕಾರಣ ಕರ್ತನನ್ನು ಕೊಂಡಾಡುವದಕ್ಕೆ ಹೇಮಾನನೂ ಯೆದುತೂನನೂ ಹೆಸರಿನಿಂದ ಲೆಕ್ಕಿಸಲ್ಪಟ್ಟು ಆಯಲ್ಪಟ್ಟ ಮಿಕ್ಕಾದವರೂ.
ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು.
ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು.
ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು.
ಆಸಾಫನಿ ಗೋಸ್ಕರ ಮೊದಲನೇ ಚೀಟು ಯೋಸೆಫನಿಗೆ ಬಂತು; ಎರಡನೆಯದು ಗೆದಲ್ಯನಿಗೆ, ಅವನೂ ಅವನ ಸಹೋ ದರರೂ ಅವನ ಕುಮಾರರೂ ಹನ್ನೆರಡು ಮಂದಿ;
ಯಾಜಕರು ಪರಿಶುದ್ಧ ಸ್ಥಳದಿಂದ ಹೊರ ಟಾಗ ಸಂಗೀತಗಾರರಾಗಿರುವ ಲೇವಿಯರೂ ಆಸಾಫ್, ಹೇಮಾನ್, ಯೆದೂತೂನ್ ಇವರೆಲ್ಲರೂ ಅವರ ಮಕ್ಕಳೂ ಸಹೋದರರೂ ನಾರು ಮಡಿಯನ್ನು ಧರಿಸಿ ಕೊಂಡು ತಾಳ ವೀಣೆ ಕಿನ್ನರಿಗಳನ್ನು ಹಿಡಿದು ಬಲಿ ಪೀಠದ ಮೂಡಣ ಪಾರ್ಶ್ವದಲ್ಲಿ ನಿಂತುಕೊಂಡರು; ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಇದ್ದರು.
ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ ಅವರ ಸೇವೆಗೆ ಯಾಜಕರ ಸರದಿ ಗಳನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ ಯಾಜಕರ ಮುಂದೆ ಸ್ತುತಿಸುವದಕ್ಕೂ ಸೇವೆಮಾಡು ವದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ ಸೇವೆಯ ಬಾಗಲಲ್ಲಿ ತಮ್ಮ ಸರದಿಗಳಾಗಿ ದ್ವಾರಪಾಲಕರನ್ನೂ ನೇಮಿಸಿದನು. ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
ಏಳನೇ ವರುಷದಲ್ಲಿ ಯೆಹೋಯಾದನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿ ಗಳಾಗಿರುವ ಯೆರೋಹಾಮನ ಮಗನಾದ ಅಜರ್ಯ ನನ್ನೂ ಯೆಹೋಹಾನಾನನ ಮಗನಾದ ಇಷ್ಮಾಯೇಲ ನನ್ನೂ ಓಬೇದನ ಮಗನಾದ ಅಜರ್ಯನನ್ನೂ ಅದಾ ಯನ ಮಗನಾದ ಮಾಸೆಯನನ್ನೂ ಜಿಕ್ರಿಯ ಮಗನಾದ ಎಲೀಷಾಫಾಟನನ್ನೂ ಕರಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿದನು.
ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸ ನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ಡಾಲುಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು
ಇಗೋ, ಪ್ರವೇಶದ್ವಾರದ ತನ್ನ ಸ್ತಂಭದ ಬಳಿ ಯಲ್ಲಿ ಅರಸನು ನಿಂತಿದ್ದನು. ಪ್ರಧಾನರೂ ತುತೂರಿ ಹಿಡಿಯುವವರೂ ಅರಸನ ಬಳಿಯಲ್ಲಿ ಇದ್ದರು. ಇದಲ್ಲದೆ ದೇಶದ ಜನರೆಲ್ಲರು ಸಂತೋಷಪಟ್ಟು ತುತೂರಿಗಳನ್ನು ಊದಿದರು. ಹಾಗೆಯೇ ಹಾಡು ಗಾರರೂ ಗೀತವಾದ್ಯಗಳನ್ನು ಹಿಡಿದು ಸ್ತುತಿಸುವದಕ್ಕೆ ಬೋಧಿಸುವವರೂ ಇದ್ದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.
ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.
ಎಲೀಚಾಫಾನನ ಮಕ್ಕಳಲ್ಲಿ ಶಿಮ್ರಿಯೂ ಯೆಗೀ ಯೇಲನೂ ಆಸಾಫನ ಮಕ್ಕಳಲ್ಲಿ
ಜೆಕರ್ಯನೂ ಮತ್ತನ್ಯನೂ ಹೆಮಾನನ ಮಕ್ಕಳಲ್ಲಿ ಯೆಹೀಯೇಲನೂ ಶಿಮ್ಮನೂ ಯೆದುತೂನನ ಮಕ್ಕಳಲ್ಲಿ ಶೆಮಾಯನೂ ಉಜ್ಜೀಯೇಲನೂ ಎದ್ದರು.
ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು.
ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿ ದರು. ಅವರ ವಿಚಾರಣೆಯ ಕರ್ತರು ಯಾರಂದರೆ: ಮೆರಾರಿಯ ಕುಮಾರರಲ್ಲಿ ಲೇವಿಯರಾದ ಯಹತನೂ ಒಬದ್ಯನೂ; ಕೆಹಾತ್ಯರ ಮಕ್ಕಳಲ್ಲಿ ಜೆಕರೀಯನೂ ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವ ರಾದ ಲೇವಿಯರೆಲ್ಲರೂ ಅದನ್ನು ನಡಿಸುತ್ತಾ ಇದ್ದರು.
ಹಾಡುಗಾರರಾದ ಅಸಾಫನ ಮಕ್ಕಳು--ನೂರಾ ಇಪ್ಪತ್ತೆಂಟು ಮಂದಿಯು.
ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.
ಮೋಶೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಯೆರೂ ಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆ ಗೋಸ್ಕರ ಯಾಜಕರನ್ನು ಅವರ ಸರತಿಯ ಪ್ರಕಾರವೂ ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.
ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು.
ಲೇವಿಯರ ಮುಖ್ಯಸ್ಥರಾದ ಹಷ ಬ್ಯನೂ ಶೇರೇಬ್ಯನೂ ಕದ್ಮೀಯೇಲನ ಮಗನಾದ ಯೇಷೂವನೂ ಅವರಿಗೆದುರಾಗಿ ನಿಂತ ಅವರ ಸಹೋದರರೂ ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಹೊಗಳುವದಕ್ಕೂ ಸ್ತೋತ್ರಮಾಡು ವದಕ್ಕೂ ವರ್ಗ ವರ್ಗಗಳಾಗಿದ್ದರು.
ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ ಹಾಡುವದರಿಂದಲೂ ತಾಳಗಳಿಂದಲೂ ವೀಣೆಗಳಿಂದಲೂ ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವದಕ್ಕೆ ಲೇವಿ ಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.
ಆ ದಿವಸದಲ್ಲಿ ಮಹಾಬಲಿಗಳನ್ನು ಅರ್ಪಿಸಿ ದೇವರು ಅವರನ್ನು ಮಹಾ ಸಂತೋಷದಿಂದ ಸಂತೋಷಿಸಲು ಮಾಡಿದ್ದರಿಂದ ಅವರು ಸಂತೋಷಪಟ್ಟರು. ಇದಲ್ಲದೆ ಹೆಂಡತಿಯರೂ ಮಕ್ಕಳೂ ಸಂತೋಷಿಸಿದರು. ಆದದರಿಂದ ಯೆರೂಸ ಲೇಮಿನ ಸಂತೋಷದ ಧ್ವನಿಯು ಬಹುದೂರಕ್ಕೆ ಕೇಳಲ್ಪಟ್ಟಿತು.
ಇದಲ್ಲದೆ ದಾವೀದನೂ ಅವನ ಮಗ ನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ ದ್ವಾರಪಾಲಕರೂ ತಮ್ಮ ದೇವರ ಸೇವೆಯ ಸಂಬಂಧದಲ್ಲಿಯೂ ಶುದ್ಧೀಕರಣದ ಸಂಬ ಂಧದಲ್ಲಿಯೂ ತಮ್ಮ ಕೆಲಸಗಳನ್ನು ನಡಿಸುತ್ತಿದ್ದರು.
ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ.
ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.