ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು.
Cross references
ಕರ್ತನು ಮೋಶೆಗೆ ಹೇಳಿದ್ದೇನೆಂದರೆ
ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡು ಮಂಜೂಷದ ಮುಂದೆ ಹೋಗಬೇಕು. ಆದರೆ ಅವರು ಏಳನೇ ದಿನ ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ತುತೂರಿಗಳನ್ನು ಊದಬೇಕು.
ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.
ಹೀಗೆಯೇ ದಾವೀದನೂ ಇಸ್ರಾಯೇಲಿನ ಹಿರಿ ಯರೂ ಸಹಸ್ರಗಳ ಮೇಲೆ ಇರುವ ಅಧಿಪತಿಗಳೂ ಸಂತೋಷವಾಗಿ ಒಬೇದೆದೋಮನ ಮನೆಯೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.
ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.
ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.
ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.
ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ.
ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ.
ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ.
ನಾನು ಕರ್ತನಲ್ಲಿ ಸಂತೋಷಿ ಸುವೆನು, ನನ್ನ ರಕ್ಷಣೆಯ ದೇವರಲ್ಲಿ ಉಲ್ಲಾಸಪಡು ವೆನು.ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.