Home Bibles ಕೀರ್ತನೆಗಳು 119:52 · ಕನ್ನಡ ಬೈಬಲ್
ಕೀರ್ತನೆಗಳು 119:52 · ಕನ್ನಡ ಬೈಬಲ್

ಓ ಕರ್ತನೇ, ಪೂರ್ವಕಾಲದಿಂದ ಬಂದಿ ರುವ ನಿನ್ನ ನ್ಯಾಯಗಳನ್ನು ಜ್ಞಾಪಕಮಾಡಿಕೊಂಡು ಆದರಣೆ ಹೊಂದಿದ್ದೇನೆ.

Cross references

ನಿರ್ಗಮಕಾಂಡ 14:29

ಆದರೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು.

ಅಂಕೆಗಳ ಪುಸ್ತಕ 16:3

ಅವರು ಮೋಶೆಗೂ ಆರೋನ ನಿಗೂ ವಿರೋಧವಾಗಿ ಕೂಡಿಕೊಂಡು--ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ; ಸಭೆಯೂ ಸಭೆ ಯಲ್ಲಿರುವ ಎಲ್ಲರೂ ಪರಿಶುದ್ಧರೇ, ಕರ್ತನು ಅವರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ನೀವು ನಿಮ್ಮನ್ನು ಸಭೆಗಿಂತ ಹೆಚ್ಚಾಗಿ ನೀವೇ ಹೆಚ್ಚಿಸಿಕೊಳ್ಳು ವದು ಯಾಕೆ ಎಂದು ಅವರಿಗೆ ಹೇಳಿದರು.

ದ್ವಿತೀಯೋಪದೇಶಕಾಂಡ 1:35

ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.

ದ್ವಿತೀಯೋಪದೇಶಕಾಂಡ 4:3

ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ?

ಕೀರ್ತನೆಗಳು 77:5

ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು.

ಕೀರ್ತನೆಗಳು 77:11

ಕರ್ತನ ಕ್ರಿಯೆಗಳನ್ನು ನೆನಸಿ ನಿಶ್ಚಯವಾಗಿ ಪುರಾತನ ಅದ್ಭುತ ಗಳನ್ನು ಜ್ಞಾಪಿಸಿಕೊಳ್ಳುವೆನು.

ಕೀರ್ತನೆಗಳು 77:12

ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.

ಕೀರ್ತನೆಗಳು 103:18

ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.

ಕೀರ್ತನೆಗಳು 105:5

ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;

ಕೀರ್ತನೆಗಳು 143:5

ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.

2 ಪೇತ್ರ 2:4

ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು.

Interlinear

Choose Theme