ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ?
Cross references
ಆಗ ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಜನರು ಮೋವಾಬಿನ ಕುಮಾರ್ತೆಯರ ಸಂಗಡ ಜಾರತ್ವ ಮಾಡಲಾರಂಭಿ ಸಿದರು.
ಇಸ್ರಾಯೇಲ್ ಬಾಳ್ಪೆಯೋರಿಗೆ ತಾನೇ ಕೂಡಿಕೊಂಡದ್ದರಿಂದ ಕರ್ತನ ಕೋಪವು ಇಸ್ರಾಯೇಲಿನ ಮೇಲೆ ಉರಿಯಿತು.
ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
ಇಗೋ, ಇವರೇ ಬಿಳಾಮನ ಮಾತಿನಿಂದ ಪೆಗೋರನ ಕಾರ್ಯದಲ್ಲಿ ಕರ್ತನಿಗೆ ವಿರೋಧವಾಗಿ ದ್ರೋಹ ಮಾಡುವದಕ್ಕೆ ಇಸ್ರಾ ಯೇಲ್ ಮಕ್ಕಳಿಗೆ ಕಾರಣವಾಗಿದ್ದರು. ಕರ್ತನ ಸಭೆ ಯೊಳಗೆ ಇವರಿಂದಲೇ ವ್ಯಾಧಿಯಾಯಿತು.
ಆದರೆ ನಿಮ್ಮ ಕಣ್ಣು ಗಳು ಕರ್ತನು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ನೋಡಿದವು.
ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ.
ಬಾಳ್‌ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು
ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.