Home Bibles ಕೀರ್ತನೆಗಳು 77:12 · ಕನ್ನಡ ಬೈಬಲ್
ಕೀರ್ತನೆಗಳು 77:12 · ಕನ್ನಡ ಬೈಬಲ್

ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.

Cross references

ದ್ವಿತೀಯೋಪದೇಶಕಾಂಡ 6:7

ಅವು ಗಳನ್ನು ನಿನ್ನ ಮಕ್ಕಳಿಗೆ ಅಭ್ಯಾಸಮಾಡಿಸಿ ನಿನ್ನ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ಹೋಗುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ವಾಗಿ ಮಾತನಾಡಬೇಕು.

ದ್ವಿತೀಯೋಪದೇಶಕಾಂಡ 7:18

ನೀನು ಅವರಿಗೆ ಭಯಪಡಬೇಡ; ನಿನ್ನ ದೇವರಾದ ಕರ್ತನು ಫರೋಹನಿಗೂ ಎಲ್ಲಾ ಐಗುಪ್ತಕ್ಕೂ ಮಾಡಿದ್ದನು

ದ್ವಿತೀಯೋಪದೇಶಕಾಂಡ 7:19

ನಿನ್ನ ಕಣ್ಣುಗಳು ನೋಡಿದ ದೊಡ್ಡ ಉಪದ್ರವ ಗಳನ್ನೂ ನಿನ್ನ ದೇವರಾದ ಕರ್ತನು ನಿನ್ನನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ ಅದ್ಭುತ ಗಳನ್ನೂ ಬಲವಾದ ಕೈಯನ್ನೂ ಚಾಚಿದ ತೋಳನ್ನೂ ನೀನು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀನು ಯಾವ ಜನಗಳಿಗೆ ಭಯಪಡುತ್ತೀಯೋ ಆ ಜನಗಳಿ ಗೆಲ್ಲಾ ನಿನ್ನ ಕರ್ತನಾದ ದೇವರು ಹಾಗೆಯೇ ಮಾಡು ವನು.

ಕೀರ್ತನೆಗಳು 71:24

ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.

ಕೀರ್ತನೆಗಳು 104:34

ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.

ಕೀರ್ತನೆಗಳು 105:2

ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.

ಕೀರ್ತನೆಗಳು 105:5

ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;

ಕೀರ್ತನೆಗಳು 119:52

ಓ ಕರ್ತನೇ, ಪೂರ್ವಕಾಲದಿಂದ ಬಂದಿ ರುವ ನಿನ್ನ ನ್ಯಾಯಗಳನ್ನು ಜ್ಞಾಪಕಮಾಡಿಕೊಂಡು ಆದರಣೆ ಹೊಂದಿದ್ದೇನೆ.

ಕೀರ್ತನೆಗಳು 143:5

ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.

ಕೀರ್ತನೆಗಳು 145:4

ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.

ಕೀರ್ತನೆಗಳು 145:11

ನಿನ್ನ ರಾಜ್ಯದ ಘನವನ್ನು ಹೇಳುವರು; ನಿನ್ನ ಪರಾಕ್ರಮವನ್ನು ನುಡಿಯುವರು.

ಯೆಶಾಯ 63:11

ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?

ಲೂಕ 24:14

ಅವರು ನಡೆದ ಈ ಎಲ್ಲಾ ವಿಷಯಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿದ್ದರು.

Interlinear

Choose Theme